ಕರ್ನಾಟಕ

karnataka

ETV Bharat / state

ಮೈಸೂರು: ನಾಳೆ ಕಂದಾಯ ಇಲಾಖೆಯಿಂದ ಬೃಹತ್ ಕಡತ ವಿಲೇವಾರಿ ಕಾರ್ಯಕ್ರಮ - ಮೈಸೂರಿನಲ್ಲಿ ಕಂದಾಯ ಇಲಾಖೆ ಬೃಹತ್ ಕಡತ ವಿಲೇವಾರಿ ಕಾರ್ಯಕ್ರಮ

ಕಂದಾಯ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಬಾಕಿ ಉಳಿದಿರುವ ಕಡತಗಳಿಗೆ ಮುಕ್ತಿ ನೀಡುವ ವಿನೂತನ ಕಾರ್ಯಕ್ರಮವನ್ನು ನಾಳೆ ಮೈಸೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಆರಂಭಿಸಲಿದ್ದಾರೆ.

Revenue  Department Massive File Disposal Program in Mysore
ಮೈಸೂರಿನಲ್ಲಿ ನಾಳೆ ಪ್ರಾಯೋಗಿಕವಾಗಿ ಕಂದಾಯ ಇಲಾಖೆ ಬೃಹತ್ ಕಡತ ವಿಲೇವಾರಿ ಕಾರ್ಯಕ್ರಮ

By

Published : Mar 2, 2022, 10:23 PM IST

ಬೆಂಗಳೂರು:ಕಂದಾಯ ಇಲಾಖೆಯಲ್ಲಿ ಸುಮಾರು 15-20 ವರ್ಷಗಳಿಂದ ಬಾಕಿ ಉಳಿದಿರುವ ಕಡತಗಳಿಗೆ ಮುಕ್ತಿ ನೀಡಿ ಜನತೆಗೆ ಅನುಕೂಲ ಮಾಡಿಕೊಡುವ ವಿನೂತನ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಪ್ರಾರಂಭಿಸಲಿದ್ದಾರೆ.

ಕಡತಗಳು ಕೇವಲ ಕಾಗದ ಅಲ್ಲ. ಅದರಲ್ಲಿ ಜನರ ಹಿತ, ಭಾವನೆ ಅಡಕವಾಗಿದೆ ಎನ್ನುವುದು ನನ್ನ ಅಭಿಪ್ರಾಯ. ನಾನಾ ಕಾರಣಗಳಿಂದ ಇತ್ಯರ್ಥ ಆಗದೆ ಇದ್ದ ಹಳೆಯ ಕಡತಗಳನ್ನು 10 ದಿನಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ತೀರ್ಮಾನ ಮಾಡಬೇಕು. ಜನರ ಅಲೆದಾಟ ತಪ್ಪಿಸುವುದು ಇದರ ಉದ್ದೇಶ. ಪ್ರಾಯೋಗಿಕವಾಗಿ ನಾಳೆ ಮೈಸೂರಿನಲ್ಲಿ ಇದನ್ನು ಪ್ರಾರಂಭಿಸುತ್ತಿದ್ದೇನೆ. ನಂತರ ರಾಜ್ಯಾದ್ಯಂತ ಈ ಅಭಿಯಾನವನ್ನು ಇಲಾಖೆ ಹಮ್ಮಿಕೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿಯೂ ಕಡತಗಳ ಸಮಸ್ಯೆ ಅರಿವಾಗಿತ್ತು. ಜಿಲ್ಲಾಧಿಕಾರಿಗಳ ನಿರ್ದೇಶನದಲ್ಲಿ ಈ ಅಭಿಯಾನ ನಡೆಯಲಿದೆ. ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಇದರ ನೇತೃತ್ವ ವಹಿಸಲಿದ್ದಾರೆ. ಕಂದಾಯ ಇಲಾಖೆ ಎಲ್ಲಾ ಅಧಿಕಾರಿಗಳು ಈ ಅಭಿಯಾನದಲ್ಲಿ ಕೆಲಸ ಮಾಡುತ್ತಾರೆ. ಕಂದಾಯ ಇಲಾಖೆಗೆ ಹೊಸ ದಿಕ್ಕನ್ನು ನೀಡಬೇಕು. ಕಂದಾಯ ಇಲಾಖೆ ಜನಸ್ನೇಹಿ ಇಲಾಖೆ ಆಗಿರಬೇಕು ಎನ್ನುವುದು ನನ್ನ ಆಶಯ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ದೇಶದ ಶಿಕ್ಷಣ ವ್ಯವಸ್ಥೆ ನನ್ನ ಮಗನ ಜೀವ ಬಲಿ ತೆಗೆದುಕೊಂಡಿತು; ಮೃತ ನವೀನ್ ತಾಯಿ ವಿಜಯಲಕ್ಷ್ಮಿ ಬೇಸರ

ABOUT THE AUTHOR

...view details