ಮೈಸೂರು: ಮಾಜಿ ಶಾಸಕ ಎಂ ಕೆ ಸೋಮಶೇಖರ್ ಮರೆತು ಹೋಗಿದ್ದ ಅವರ ಮೊಬೈಲ್ ಫೋನ್‌ನ ವಾಪಸ್ ಅವರಿಗೆ ತಲುಪಿಸಿದ ಯುವಕರಿಗೆ ಸನ್ಮಾಸಲಾಗಿದೆ.
ಮರೆತುಹೋಗಿದ್ದ ಮಾಜಿ ಶಾಸಕರ ₹60 ಸಾವಿರ ಮೌಲ್ಯದ ಮೊಬೈಲ್ ವಾಪಸ್ ನೀಡಿದ ಯುವಕರು!! - Farmer MLA MKSomashekar
ವಾಯುವಿಹಾರಕ್ಕೆಂದು ಬಂದಿದ್ದ ಯುವಕರು ಕಟ್ಟೆಯ ಮೇಲೆ ಬಿದ್ದಿದ್ದ ಮೊಬೈಲ್ ಗಮನಿಸಿ, ಫೋನ್ನಲ್ಲಿದ್ದ ಕಾಂಟ್ಯಾಕ್ಟ್ ನಂಬರ್ಗಳನ್ನು ಬಳಸಿ ಸೋಮಶೇಖರ್ ಅವರ ಮನೆಗೆ ತಂದು ಕೊಟ್ಟಿದ್ದಾರೆ..
![ಮರೆತುಹೋಗಿದ್ದ ಮಾಜಿ ಶಾಸಕರ ₹60 ಸಾವಿರ ಮೌಲ್ಯದ ಮೊಬೈಲ್ ವಾಪಸ್ ನೀಡಿದ ಯುವಕರು!! ಮೊಬೈಲ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಯುವಕರು](https://etvbharatimages.akamaized.net/etvbharat/prod-images/768-512-8113183-267-8113183-1595328013265.jpg)
ಮೊಬೈಲ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಯುವಕರು
ಇಂದು ಬೆಳಗ್ಗೆ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅವರು ಚಾಮುಂಡಿ ಬೆಟ್ಟದಲ್ಲಿ ವಾಯುವಿಹಾರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಗೋಪುರದ ಬಳಿ ಧ್ಯಾನ ಮಾಡುವಾಗ ಆಕಸ್ಮಿಕವಾಗಿ ಅವರ ₹60 ಸಾವಿರ ಮೌಲ್ಯದ ತಮ್ಮ ಐಫೋನ್‌ನ ಮರೆತು ಬಂದಿದ್ದಾರೆ.
ಅದೇ ವೇಳೆ ಅಲ್ಲಿ ವಾಯುವಿಹಾರಕ್ಕೆಂದು ಬಂದಿದ್ದ ಯುವಕರು ಕಟ್ಟೆಯ ಮೇಲೆ ಬಿದ್ದಿದ್ದ ಮೊಬೈಲ್ ಗಮನಿಸಿ, ಫೋನ್ನಲ್ಲಿದ್ದ ಕಾಂಟ್ಯಾಕ್ಟ್ ನಂಬರ್ಗಳನ್ನು ಬಳಸಿ ಸೋಮಶೇಖರ್ ಅವರ ಮನೆಗೆ ತಂದು ಕೊಟ್ಟಿದ್ದಾರೆ. ಇದರಿಂದ ಸಂತಸರಾದ ಮಾಜಿ ಶಾಸಕರು, ಆ ಯುವಕರಿಗೆ ಶಾಲು ಹೊದಿಸಿ ಪುಸ್ತಕಗಳನ್ನು ನೀಡಿ ಅಭಿನಂದಿಸಿದ್ದಾರೆ.