ಕರ್ನಾಟಕ

karnataka

ETV Bharat / state

3 ನಿಮಿಷದಲ್ಲಿ ನಡೆದಿತ್ತು ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ.. ಡಿಸಿಪಿ ಪ್ರಕಾಶ್‌ಗೌಡ - ಮೈಸೂರು ಕ್ರೈಂ

15 ವರ್ಷಗಳ ಹಿಂದೆ ಕವಿತಾ ಎಂಬುವರನ್ನು ಮದುವೆಯಾಗಿದ್ದರು. ಆದರೆ, ಇವರಿಗೆ ಮಕ್ಕಳಾಗದ ಕಾರಣ ಬೇರೆ ಬೇರೆಯಾಗಿ ವಾಸವಾಗಿದ್ದಾರೆ. ಹೀಗಾಗಿ, ಪೃಥ್ವಿ ಎಂಬ ಹುಡುಗನನ್ನು ದತ್ತು ಪಡೆದು ಆತನೊಂದಿಗೆ ವಾಸಿಸುತ್ತಿದ್ದರು..

retired-principal-murder-happend-in-3-minutes-dcp-said
3 ನಿಮಿಷದಲ್ಲಿ ನಡೆದಿತ್ತು ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ

By

Published : Sep 21, 2020, 5:19 PM IST

Updated : Sep 21, 2020, 5:31 PM IST

ಮೈಸೂರು :ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿಯವರನ್ನು ಕೇವಲ 3 ನಿಮಿಷದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಡಿಸಿಪಿ ಡಾ.ಪ್ರಕಾಶ್‌ಗೌಡ ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಸಂಜೆ 7.45 ರಿಂದ 7.48 ಅಂದರೆ 3 ನಿಮಿಷದಲ್ಲಿ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರನ್ನು ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ‌ ಮಾಡಿದ್ದಾರೆ.

15 ವರ್ಷಗಳ ಹಿಂದೆ ಕವಿತಾ ಎಂಬುವರನ್ನು ಮದುವೆಯಾಗಿದ್ದರು. ಆದರೆ, ಇವರಿಗೆ ಮಕ್ಕಳಾಗದ ಕಾರಣ ಬೇರೆ ಬೇರೆಯಾಗಿ ವಾಸವಾಗಿದ್ದಾರೆ. ಹೀಗಾಗಿ, ಪೃಥ್ವಿ ಎಂಬ ಹುಡುಗನನ್ನು ದತ್ತು ಪಡೆದು ಆತನೊಂದಿಗೆ ವಾಸಿಸುತ್ತಿದ್ದರು.

ಕೊಲೆಯಾದ ಪರಶಿವಮೂರ್ತಿ ರಿಯಲ್ ಎಸ್ಟೇಟ್, ಬಡ್ಡಿ ವ್ಯವಹಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಇಬ್ಬರು ಬಂದು ಕೊಲೆ ಮಾಡಿ ವಾಪಸ್ ಹೋಗಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಡಿಸಿಪಿ ಡಾ.ಪ್ರಕಾಶ್ ಗೌಡ ತಿಳಿಸಿದರು.

Last Updated : Sep 21, 2020, 5:31 PM IST

ABOUT THE AUTHOR

...view details