ಮೈಸೂರು :ನಗರದರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮ್ಯೂಸಿಯಂ ಈಗ ಆಕರ್ಷಣೀಯ ಸ್ಥಳವಾಗಿದೆ. ಸುಮಾರು 9 ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡಿರುವ ಮ್ಯೂಸಿಯಂ ಈಗ ಎಲ್ಲರನ್ನೂ ಸೆಳೆಯುತ್ತಿರುವ ಕೇಂದ್ರವಾಗಿದೆ.
ಮೈಸೂರಿನಲ್ಲಿ ₹9 ಕೋಟಿ ವೆಚ್ಚದಲ್ಲಿ ರೈಲ್ವೆ ಮ್ಯೂಸಿಯಂ ನವೀಕರಣ.. ಅದರ ವಿಶೇಷತೆ ಇಲ್ಲಿವೆ.. - Latest news for Railway
ಮೈಸೂರು ಮಹಾರಾಜ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ರೈಲ್ವೆ ಪ್ರಯಾಣಕ್ಕೆ ಹೋಗುವಾಗ ಬಳಸುತ್ತಿದ್ದ ವಸ್ತುಗಳೂ ಸಹ ಈ ಮ್ಯೂಸಿಯಂನಲ್ಲಿರುವುದು ವಿಶೇಷ.
![ಮೈಸೂರಿನಲ್ಲಿ ₹9 ಕೋಟಿ ವೆಚ್ಚದಲ್ಲಿ ರೈಲ್ವೆ ಮ್ಯೂಸಿಯಂ ನವೀಕರಣ.. ಅದರ ವಿಶೇಷತೆ ಇಲ್ಲಿವೆ.. railway-museum-in-mysore](https://etvbharatimages.akamaized.net/etvbharat/prod-images/768-512-6407841-thumbnail-3x2-dr.jpg)
ರೈಲ್ವೆ ಮ್ಯೂಸಿಯಂ ವಿಶೇಷತೆಗಳೇನು?:ರೈಲ್ವೆ ಮ್ಯೂಸಿಯಂ 3 ಎಕರೆ ವಿಸ್ತೀರ್ಣವಿದೆ. ಶೇ. 90%ರಷ್ಟು ಹಸಿರು ವಲಯದಿಂದ ಕೂಡಿದೆ. ರೈಲ್ವೆಗೆ ಸಂಭಂದಿಸಿದ ಉಪಕರಣಗಳು, ಕೆಫೆಟೇರಿಯಾ, ವೀಕ್ಷಣಾ ಗೋಪುರ, ಶ್ರವಣ ಮತ್ತು ದೃಶ್ಯ ಕೊಠಡಿ, ರೈಲ್ ಕೋಚ್ ಕೆಫೆ, ಶ್ರೀರಂಗ ಪೆವಿಲಿಯನ್, ಚಿಣ್ಣರ ಅಂಗಳ, ರೈಲ್ವೆಯಲ್ಲಿ ಆರಂಭದಲ್ಲಿ ಉಪಯೋಗಿಸುತ್ತಿದ್ದ ಸಿಗ್ನಲ್ ವ್ಯವಸ್ಥೆಯ ಚಿತ್ರಗಳು, ನಾಲ್ವಡಿ ಕೃಷ್ಣರಾಜ ಒಡೆಯರ್ ಪತ್ನಿ ಬಳಸುತ್ತಿದ್ದ ಸಲೂನ್ ಗಮನ ಸೆಳೆಯುತ್ತಿವೆ. ಇದರ ಜೊತೆಗೆ ಮೈಸೂರು ಮಹಾರಾಜ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ರೈಲ್ವೆ ಪ್ರಯಾಣಕ್ಕೆ ಹೋಗುವಾಗ ಬಳಸುತ್ತಿದ್ದ ವಸ್ತುಗಳೂ ಸಹ ಈ ಮ್ಯೂಸಿಯಂನಲ್ಲಿರುವುದು ವಿಶೇಷ.
ಪ್ರವೇಶ ಶುಲ್ಕ:ಮ್ಯೂಸಿಯಂ ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 9 ಗಂಟೆವರೆಗೂ ತೆರೆದಿರುತ್ತದೆ. ವಯಸ್ಕರಿಗೆ ₹50, ಹಿರಿಯ ನಾಗರಿಕರಿಗೆ ₹25, ಮಕ್ಕಳಿಗೆ 20 ರೂ. ಪ್ರವೇಶ ಫೀ ನಿಗದಿಗೊಳಿಸಲಾಗಿದೆ.