ಮೈಸೂರು:ಕೊರೊನಾ ಸೋಂಕು ಹೆಚ್ಚಾಗುತ್ತಿರುವ ನೆಪದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿರುವುದರಿಂದ ಜಿಲ್ಲಾಧಿಕಾರಿ ವಿರುದ್ಧ ಹೋಟೆಲ್ ಹಾಗೂ ಟ್ರಾವೆಲ್ ಉದ್ಯಮಿಗಳು ಅಸಮಾಧಾನ ಹೊರಹಾಕಿದ್ದಾರೆ.
ದಸರಾವನ್ನೇ ನಂಬಿದ್ದ ಹೋಟೆಲ್ಗಳು ಹಾಗೂ ಟ್ರಾವೆಲ್ ಉದ್ಯಮಿಗಳಿಗೆ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಆದೇಶ ಭಾರಿ ಹೊಡೆತ ಕೊಟ್ಟಿದೆ. ಕೊರೊನಾ ಆರ್ಭಟದ ನಡುವೆ ಉದ್ಯಮ ವಲಯವನ್ನು ಮೇಲೆತ್ತದೆ ಮತ್ತಷ್ಟು ಆಳಕ್ಕೆ ತಳ್ಳುತ್ತಿದ್ದಾರೆ ಎಂಬುದು ಉದ್ಯಮಿಗಳ ಆರೋಪವಾಗಿದೆ.
ಸುದ್ದಿಗೊಷ್ಟಿಯಲ್ಲಿ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ಹೊರಹಾಕಿದ ಉದ್ಯಮಿಗಳು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್, ಕೊರೊನಾದಿಂದ ಟ್ರಾವೆಲ್ ಉದ್ಯಮ ನೆಲಕಚ್ಚಿದೆ. ಆದರೀಗ ದಸರಾಗೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ನಿರ್ಬಂಧಿಸಿರುವುದರಿಂದ, ಮತ್ತಷ್ಟು ಹೊಡೆತ ಬೀಳಲಿದೆ. ಕೋವಿಡ್ ನಡುವೆ ಮುನ್ನೆಚ್ಚರಿಕೆ ತೆಗೆದುಕೊಂಡು ತಾಣಗಳಿಗೆ ಅವಕಾಶ ನೀಡಬೇಕು ಎಂದರು.
ಮೈಸೂರು ಜಿಲ್ಲಾ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಹೋಟೆಲ್ ಉದ್ಯಮಗಳ ಮೇಲೆ ಒತ್ತಡ ಹೇರುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಹೋಟೆಲ್ಗಳು ಮುಚ್ಚಲಿವೆ ಎಂದು ಕಿಡಿಕಾರಿದರು.