ಮೈಸೂರು :ಅರಮನೆಯಲ್ಲಿ ನಡೆಯಲಿರುವ ಶರನ್ನವರಾತ್ರಿಗೆ ಕೋವಿಡ್ ಹಿನ್ನೆಲೆ ಸಾರ್ವಜನಿಕರು ಸೇರಿ ಯಾರಿಗೂ ಪ್ರವೇಶವಿಲ್ಲ, ಕೇವಲ ಸಾಂಪ್ರದಾಯಿಕವಾಗಿ ಮಾತ್ರ ನಡೆಸಲಾಗುವುದು ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಶರನ್ನವರಾತ್ರಿಯಲ್ಲಿ ಅರಮನೆ ಪ್ರವೇಶ ನಿರ್ಬಂಧ.. ಪ್ರಮೋದಾ ದೇವಿ ಒಡೆಯರ್ - Navratri Festival
ಅರಮನೆಯಲ್ಲಿ 10 ದಿನಗಳು ನಡೆಯಲಿರುವ ಶರನ್ನವರಾತ್ರಿಗೆ ಕೋವಿಡ್ ಹಿನ್ನೆಲೆ ಈ ಬಾರಿ ಪೂಜಾ ಕಾರ್ಯಗಳು ಕೇವಲ ಸಾಂಪ್ರದಾಯಿಕವಾಗಿ ಮಾತ್ರ ನಡೆಯಲಿವೆ..
ಪ್ರಮೋದದೇವಿ ಒಡೆಯರ್
ಅರಮನೆಯಲ್ಲಿ 10 ದಿನಗಳು ನಡೆಯಲಿರುವ ಶರನ್ನವರಾತ್ರಿಗೆ ಕೋವಿಡ್ ಹಿನ್ನೆಲೆ ಈ ಬಾರಿ ಪೂಜಾ ಕಾರ್ಯಗಳು ಕೇವಲ ಸಾಂಪ್ರದಾಯಿಕವಾಗಿ ಮಾತ್ರ ನಡೆಯಲಿವೆ. ಮುನ್ನೆಚ್ಚರಿಕೆಯ ದೃಷ್ಟಿಯಿಂದ ಕುಟುಂಬದ ಸದಸ್ಯರು ಒಳಗೊಂಡಂತೆ ಸಾರ್ವಜನಿಕರು ಹಾಗೂ ಮಾಧ್ಯಮದವರಿಗೆ ಅವಕಾಶವಿಲ್ಲ. ಕೋವಿಡ್ ಕಾರಣದಿಂದಾಗಿ ಈ ನಿರ್ಧಾರಕ್ಕೆ ಮುಂದಾಗಿದ್ದೇವೆ. ಎಲ್ಲರೂ ಸಂಪೂರ್ಣ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.