ಮೈಸೂರು:ದೇವಸ್ಥಾನದ ಮುಂಭಾಗಕ್ಕೂ ಭಕ್ತಾದಿಗಳು ಬಂದು ಕೈ ಮುಗಿಯುತ್ತಾರೆ. ಇದರಿಂದ ಲಾಕ್‌ಡೌನ್ ನಿಯಮ ಉಲ್ಲಂಘನೆಯಾಗಲಿದೆ ಎಂಬ ಉದ್ದೇಶದಿಂದ ದೇವಸ್ಥಾನ ಆಡಳಿತ ಮಂಡಳಿ, ನಂಜನಗೂಡು ದೇವಸ್ಥಾನ ಸುತ್ತಮುತ್ತ ನಿರ್ಬಂಧ ವಿಧಿಸಿದೆ.
ಹೌದು, ಕೇಂದ್ರ ಪುರಾತತ್ವ ಇಲಾಖೆ ಸೂಚನೆ ಹಾಗೂ ಲಾಕ್‌ಡೌನ್ ಹಿನ್ನೆಲೆ ನಂಜನಗೂಡು ದೇವಸ್ಥಾನ ಬಾಗಿಲು ಹಾಕಲಾಗಿದೆ. ಆದರೆ, ದೇವಸ್ಥಾನದ ಒಳಗೆ ಧಾರ್ಮಿಕ ಹಾಗೂ ಪೂಜಾ ಕೈಂಕರ್ಯಗಳು ನಡೆಯುತ್ತಲೆ ಬರುತ್ತಿವೆ. ದೇವರ ದರ್ಶನ ಸಿಗದಿದ್ದರೂ ಪರವಾಗಿಲ್ಲ, ದೇವಸ್ಥಾನದ ಹೊರ ಭಾಗದಲ್ಲಿ ನಿಂತು ಭಕ್ತಾದಿಗಳು, ಪೂಜೆ ಸಲ್ಲಿಸಿ, ಕೈ ಮುಗಿದು ಹೋಗುತ್ತಿದ್ದರು.
ನಂಜನಗೂಡು ದೇವಸ್ಥಾನದ ಮುಂಭಾಗದಲ್ಲೂ ಸಾರ್ವಜನಿಕರಿಗೆ ನಿರ್ಬಂಧ ಆದರೆ, ಕೆಲವು ದಿನಗಳಿಂದ ಕೆಲ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲ ಮಾಡಿದ ಪರಿಣಾಮ ದೇವಸ್ಥಾನದ ಮುಂಭಾಗದಲ್ಲಾದರೂ ಕೈಮುಗಿದು ತೆರಳಬೇಕೆನ್ನುವ ಹಲವಾರು ಭಕ್ತರು, ನಂಜನಗೂಡಿಗೆ ಬಂದು ದೇವಸ್ಥಾನದ ಮುಂಭಾಗದ ಆವರಣದಲ್ಲಿಯೇ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ಇದರಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಮಾಧ್ಯಮಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧದ ಕುರಿತು ವರದಿ ಪ್ರಸಾರ ಮಾಡಲಾಯಿತು.
ಇದರಿಂದ ಎಚ್ಚೆತ್ತುಕೊಂಡ ನಂಜುಂಡೇಶ್ವರ ದೇವಾಲಯ ಆಡಳಿತ ಮಂಡಳಿಯು ದೇವಸ್ಥಾನದ ಸುತ್ತಮುತ್ತ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದೆ. ದೇವಸ್ಥಾನ ಮುಂಭಾಗ ಭದ್ರತಾ ಸಿಬ್ಬಂದಿ ಜೊತೆಗೆ ಎಎಸ್ಐರನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ದೇವಸ್ಥಾನದ ಮುಂಭಾಗದ ಆವರಣದಲ್ಲಿ ಕೈ ಮುಗಿಯಲು ಬರುವ ಭಕ್ತಾದಿಗಳಿಗೆ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿ ಬುದ್ಧಿ ಹೇಳಿ ಕಳುಹಿಸುತ್ತಾರೆ.
ಓದಿ:ಬೆಂಗಳೂರು ಸೇರಿದಂತೆ ಒಳನಾಡು-ಕರಾವಳಿಯಲ್ಲಿ ವ್ಯಾಪಕ ಮಳೆ ಸಾಧ್ಯತೆ