ಕರ್ನಾಟಕ

karnataka

ETV Bharat / state

ಕೊರೊನಾ 2ನೇ ಅಲೆ ಆತಂಕ: 14 ದಿನಗಳವರೆಗೆ ಚಾಮುಂಡೇಶ್ವರಿ ದೇವಿ ದರ್ಶನವಿಲ್ಲ - Restriction on Darshan of Chamundeshwari Devi in mysore

ಬುಧವಾರ (ಏ. 21) ರಾತ್ರಿ 9ರಿಂದ ಮೇ 4ರ ಬೆಳಗ್ಗೆ 6 ಗಂಟೆವರೆಗೆ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಧಾರ್ಮಿಕ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಹಿನ್ನೆಲೆ ಪ್ರವೇಶ ನಿರ್ಬಂಧಿಸಲಾಗಿದೆ.

chamundeshwari-devi
ಚಾಮುಂಡೇಶ್ವರಿ ದೇವಿ

By

Published : Apr 21, 2021, 8:40 PM IST

ಮೈಸೂರು: ಕೊರೊನಾ 2ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಭಕ್ತಾದಿಗಳಿಗೆ ಹದಿನಾಲ್ಕು ದಿನ ಚಾಮುಂಡಿ ದೇವಿಯ ದರ್ಶನವಿರುವುದಿಲ್ಲ.

ಪ್ರಕಟಣೆ
ಬುಧವಾರ (ಏ. 21) ರಾತ್ರಿ 9ರಿಂದ ಮೇ 4ರ ಬೆಳಗ್ಗೆ 6 ಗಂಟೆವರೆಗೆ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಧಾರ್ಮಿಕ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಹಿನ್ನೆಲೆ ಪ್ರವೇಶ ನಿರ್ಬಂಧಿಸಲಾಗಿದೆ. ಚಾಮುಂಡೇಶ್ವರಿ ದೇವಿಗೆ ಅರ್ಚಕರುಗಳಿಂದ ಎಂದಿನಂತೆ ಪೂಜೆ, ಪುನಸ್ಕಾರ ನಡೆಯಲಿದೆ. 14 ದಿನಗಳವರೆಗೆ ಪ್ರವಾಸಿಗರು, ಭಕ್ತಾದಿಗಳು, ಸ್ಥಳೀಯರಿಗೆ ಪ್ರವೇಶವಿರುವುದಿಲ್ಲ ಎಂದು ಚಾಮುಂಡಿ ಬೆಟ್ಟದ ಕಾರ್ಯನಿರ್ವಹಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ಕೊರೊನಾ ಮತ್ತೊಮ್ಮೆ ಅಡ್ಡಿಪಡಿಸಿದೆ.

ABOUT THE AUTHOR

...view details