ಮೈಸೂರು:ಹಾಟ್ಸ್ಪಾಟ್ ರಾಜ್ಯಗಳಿಂದ ಬರುವವರಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ದೆಹಲಿ, ರಾಜಸ್ಥಾನ ರಾಜ್ಯಗಳ ಮೇಲೆ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಕೆಲ ಸಡಿಲಿಕೆ ಮಾಡಲಾಗಿದೆ. ಸಂಪೂರ್ಣ ಪ್ರದೇಶ, ಗ್ರಾಮಗಳ ಬದಲು ಸಂಬಂಧಿಸಿದ ಮನೆ ಮತ್ತು ಬೀದಿ ಮಾತ್ರ ನಿರ್ಬಂಧಿತ ಪ್ರದೇಶ ಆಗಲಿದೆ. ಅಪಾರ್ಟ್ಮೆಂಟ್ಗಳು ಇದ್ದರೇ ಮೂರು ಮಹಡಿಗಷ್ಟೆ ಸೀಮಿತವಾಗಿ ಇರಲಿದೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ವಲಸೆ ಕಾರ್ಮಿಕರನ್ನು ಉತ್ತರಪ್ರದೇಶ, ಬಿಹಾರ್, ಜಾರ್ಖಂಡ್ಗಳಿಗೆ ನಾಲ್ಕು ರೈಲುಗಳ ಮೂಲಕ ಕಳುಹಿಸಲಾಗಿದೆ. ಕೊನೆಯ ಎರಡು ರೈಲುಗಳಿಗೆ ಸರ್ಕಾರವೇ ಪ್ರಯಾಣದ ವೆಚ್ಚ ಭರಿಸಿದೆ. ನಾಗಲ್ಯಾಂಡ್, ಮಣಿಪುರ,ಮಧ್ಯಪ್ರದೇಶ ಇತರೆ ರಾಜ್ಯಗಳಿಗೆ ಹೋಗುವ ಕಾರ್ಮಿಕರಿಗೆ ಬೆಂಗಳೂರಿನವರೆಗೆ ಬಸ್ ಮೂಲಕ ಕಳುಹಿಸಲಾಗಿದೆ. ಅಲ್ಲಿಂದ ಅವರು ರೈಲು ಮೂಲಕ ತೆರಳಿದ್ದಾರೆ ಎಂದರು.
ಹಾಟ್ಸ್ಪಾಟ್ ರಾಜ್ಯಗಳಿಂದ ಬರುವವರಿಗೆ ಸರ್ಕಾರ ನಿರ್ಬಂಧ ಹಾಕಿದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ದೆಹಲಿ, ರಾಜಸ್ಥಾನ ರಾಜ್ಯಗಳ ಮೇಲೆ ನಿಗಾ ವಹಿಸಲಾಗಿದೆ. ಅನ್ಯ ರಾಜ್ಯಗಳಿಂದ ಬರುವವರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ ಎಂದರು.
ಕೇರಳದಿಂದ ಹೆಚ್.ಡಿ ಕೋಟೆಯ ಕಾಡಂಚಿನ ಗ್ರಾಮಗಳಿಗೆ ಬರುತ್ತಿರುವ ಬಗ್ಗೆ ದೂರು ಬಂದಿದೆ. ಮದ್ಯ ಖರೀದಿಗಾಗಿ ಬರುತ್ತಿರುವ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.