ಕರ್ನಾಟಕ

karnataka

ETV Bharat / state

ಕಬಿನಿ ಹಿನ್ನೀರಿನಲ್ಲಿ ‘ಗಜ’ ರಿಲ್ಯಾಕ್ಸ್​... ನಾಗರಹೊಳೆಯಲ್ಲಿ ಸಾರಥಿ ರೌಂಡ್​​​ - kannada news

ಲೋಕಸಭಾ ಚುನಾವಣೆ ಮೂಡ್​​ನಿಂದ ಹೊರಬಂದ ಯಜಮಾನ, ಪ್ರಕೃತಿ ಮಡಿಲಲ್ಲಿ ರಿಲಾಕ್ಸ್ ಅದ್ರು.

ಚಾಲೆಂಜಿಂಗ್ ಸ್ಟಾರ್ ದರ್ಶನ್

By

Published : May 4, 2019, 11:16 PM IST

ಮೈಸೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸಮಲತಾ ಅಂಬರೀಶ್ ಪರವಾಗಿ ಅಬ್ಬರದ ಪ್ರಚಾರ ನಡೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಲ್ಯಾಕ್ಸ್​ಗಾಗಿ ಅರಣ್ಯ ಪ್ರದೇಶಕ್ಕೆ ತೆರಳಿದ್ದಾರೆ.

ತಿಂಗಳ ಕಾಲ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿ, ಚುನಾವಣೆ ಮುಗಿದ ನಂತರ ಸಿನಿಮಾ ಶೂಟಿಂಗ್ ತೆರಳಿದ್ದ ದರ್ಶನ್, ಮತ್ತೆ ಮೈಸೂರಿಗೆ ವಾಪಸ್ಸಾಗಿ ತಮ್ಮ ಪ್ರಿತಿಯ ಕಾಡಿನ ಲೋಕಕ್ಕೆ ಜಾರಿಕೊಂಡಿದ್ದಾರೆ.

ಶನಿವಾರ ಬೆಳಿಗ್ಗೆಯಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಹಾಗೂ ಕಬಿನಿ ಹಿನ್ನೀರಿನ ಪ್ರಕೃತಿಯ ಸೌಂದರ್ಯ ಆಸ್ವಾದಿಸುತ್ತಿರುವ ದರ್ಶನ್, ಕೈ ನೋವಿನಲ್ಲಿಯೂ ಪ್ರಕೃತಿ ಸೌಂದರ್ಯ ಕ್ಲಿಕ್ಕಿಸಿದ್ರು.

ಕಳೆದ ತಿಂಗಳು ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ದರ್ಶನ್ ಕಾಡಿನಲ್ಲಿ ತೆಗೆದ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟು, ಅದರಲ್ಲಿ ಬಂದ ಹಣವನ್ನು ಸಮಾಜದ ಕಾರ್ಯಕ್ಕೆ ಬಳಸಿದ್ದನ್ನು ಸ್ಮರಿಸಬಹುದು.

ABOUT THE AUTHOR

...view details