ಕರ್ನಾಟಕ

karnataka

ETV Bharat / state

ದಸರಾ ಪೂರ್ವಾಭ್ಯಾಸ: ನಾಗರಹೊಳೆಯಲ್ಲಿ ಹೆಚ್ಚುವರಿ ಆನೆಗಳಿಗೆ ತಾಲೀಮು

ಕೊರೊನಾ ಹಿನ್ನೆಲೆ ಈ ಬಾರಿ ಸರಳ ದಸರಾ ಆಚರಣೆ ಮಾಡುವುದರಿಂದ ಜಂಬೂ ಸವಾರಿಗೆ ಐದು ಆನೆಗಳನ್ನು ಮಾತ್ರ ಆಯ್ಕೆ ಮಾಡಲಾಗಿದ್ದು, ಅವುಗಳಿಗೆ ತಾಲೀಮು ನಡೆಸಲಾಗುತ್ತಿದೆ.

Reharsal for Dasara elephants
Reharsal for Dasara elephants

By

Published : Sep 22, 2020, 12:35 PM IST

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ‌ ದಸರಾ ಹೆಚ್ಚುವರಿ ಆನೆಗಳ ತಾಲೀಮು ನಡೆಸಲಾಗುತ್ತಿದೆ.

ನಾಗರಹೊಳೆಯಲ್ಲಿ ಆನೆಗಳಿಗೆ ತಾಲೀಮು

ಹೆಚ್​.ಡಿ.ಕೋಟೆ ತಾಲೂಕು ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಬಳ್ಳೆ ಆನೆ ಶಿಬಿರದವರೆಗೆ ಆನೆಗಳ ತಾಲೀಮು ನಡೆಸಲಾಗುತ್ತಿದ್ದು, ಈ ಬಾರಿ ಸರಳ ದಸರವಾಗಿರುವುದರಿಂದ ಜಂಬೂ ಸವಾರಿಗೆ ಆಯ್ಕೆಯಾಗಿರುವ ಅಭಿಮನ್ಯು, ಕಾವೇರಿ, ವಿಕ್ರಮ, ವಿಜಯ, ಗೋಪಿ‌ ಆನೆಗಳ‌ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ಮುಂಜಾಗ್ರತವಾಗಿ ಬೇರೆ ಆನೆಗಳ ಆಯ್ಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕೊರೊನಾ ಹಿನ್ನೆಲೆ ಆನೆಗಳಿಗೂ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡೇ ಅರಮನೆಗೆ ಕರೆತರಲಾಗುವುದು. ಆದರೆ ಅರಮನೆಗೆ ಬಂದಾಗ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದರೆ ಮತ್ತೆ ಆನೆಗಳನ್ನು ಹುಡುಕುವ ಬದಲು ಈಗಲೇ ಪಟ್ಟಿ ಮಾಡಿಕೊಂಡರೆ ಅನುಕೂಲವಾಗಲಿದೆ ಎಂಬ ಚಿಂತನೆ ಅರಣ್ಯ ಇಲಾಖೆಯದ್ದಾಗಿದೆ.

ABOUT THE AUTHOR

...view details