ಕರ್ನಾಟಕ

karnataka

ETV Bharat / state

ಜೆಎಸ್​ಎಸ್ ಮೆಡಿಕಲ್​ ಕಾಲೇಜಿನಲ್ಲಿ ಉಕ್ರೇನ್​ನಿಂದ ಬಂದ 511 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ: ಸುತ್ತೂರು ಶ್ರೀ

ಉಕ್ರೇನ್​ನಿಂದ ಬಂದಿರುವ ವಿದ್ಯಾರ್ಥಿಗಳಿಗಾಗಿ ಜೆಎಸ್ಎಸ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಬ್ರಿಡ್ಜ್ ಕೋರ್ಸ್ ನಡೆಸಲಾಗುತ್ತದೆ. ಇದುವರೆಗೆ 511 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರೆಸಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.

By

Published : May 1, 2022, 8:17 PM IST

Suttur Sri
ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಮೈಸೂರು: ಯುದ್ಧ ಪೀಡಿತ ಉಕ್ರೇನ್​​ನಿಂದ ಬಂದಿರುವ ಮೆಡಿಕಲ್ ವಿದ್ಯಾರ್ಥಿಗಳಿಗೆ, ಜೆಎಸ್ಎಸ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಬ್ರಿಡ್ಜ್ ಕೋರ್ಸ್ ನಡೆಸಲಾಗುತ್ತದೆ. ಇಲ್ಲಿಯತನಕ 511 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರೆಸಲು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿ ವಿದ್ಯಾಭ್ಯಾಸ ಮುಂದುವರೆಸುವವರಿಗೆ ಯಾವುದೇ ಸರ್ಟಿಫಿಕೇಟ್ ಕೊಡಲ್ಲ, ಇದಕ್ಕೆ ಕಾನೂನಿನಲ್ಲಿ ಅವಕಾಶ ಕೂಡ ಇಲ್ಲ ಎಂದು ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಈ ಎಲ್ಲಾ ವಿದ್ಯಾರ್ಥಿಗಳಿಗೂ ಯಾವುದೇ ಶುಲ್ಕ ತೆಗೆದುಕೊಳ್ಳದೆ ಉಚಿತವಾಗಿ ಬೋಧನೆ ಮಾಡಲಾಗುವುದು. ಮೇ 6 ರಿಂದ ಈ ತರಗತಿಗಳು ಆರಂಭವಾಗಲಿವೆ. ಮೆಡಿಕಲ್ ಕಾಲೇಜಿನಲ್ಲಿ ಥಿಯೇರಿ ಮತ್ತು ಪ್ರ್ಯಾಕ್ಟಿಕಲ್ ಕ್ಲಾಸ್ ಇರುತ್ತದೆ. ಆದರೆ ರೋಗಿಗೆ ಚಿಕಿತ್ಸೆ ನೀಡುವಂತಿಲ್ಲ, ಆಪರೇಷನ್ ಥಿಯೇಟರ್​ನಲ್ಲಿ ಆಪರೇಷನ್​ ನೋಡಬಹುದಷ್ಟೇ. ಉಕ್ರೇನ್ ಬಿಟ್ಟು ಬಂದಿರುವ ಕಾರಣ ಮೆಡಿಕಲ್ ಸ್ಟೂಡೆಂಟ್ಸ್​​ ವಿದ್ಯಾಭ್ಯಾಸ ಮೊಟಕುಗೊಳ್ಳಬಾರದು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದೇವೆ. ಪರೀಕ್ಷಾ ಮೌಲ್ಯ ಮಾಪನ ಕೂಡ ಮಾಡಲಾಗುವುದು ಎಂದು ಸ್ವಾಮೀಜಿ ಹೇಳಿದರು.

ಇದನ್ನೂ ಓದಿ:ನಾಳೆ ರಂಜಾನ್ ರಜೆ: ವಿವಿಧ ಇಲಾಖೆಗಳ ಸಭೆ ಮುಂದೂಡಿದ ಸಿಎಂ ಬೊಮ್ಮಾಯಿ

ಜೆಎಸ್ಎಸ್ ತಾಂತ್ರಿಕ ಮತ್ತು ವಿಜ್ಞಾನ ಕಾಲೇಜಿನ ಕುಲಪತಿ ಡಾ. ಸುರೇಶ್ ಮಾತನಾಡಿ, ಕೋರ್ಸ್ ಕಂಟೆಂಟ್ ನೀಡಲಾಗುವುದು. ಬ್ರಿಡ್ಜ್ ಕೋರ್ಸ್ ಮಾಡಿರುವುದಕ್ಕೆ ಸರ್ಟಿಫಿಕೇಟ್ ಕೊಡುತ್ತೇವೆ. ಕರ್ನಾಟಕ ಮಾತ್ರವಲ್ಲದೆ ದೇಶದ ಎಲ್ಲಾ ರಾಜ್ಯದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲಾಗುವುದು. ಪ್ರತ್ಯೇಕವಾಗಿ ಇವರಿಗೆ ಕ್ಲಾಸ್ ಮಾಡಲಾಗುವುದು. ಇದು ನಮಗೆ ದೊಡ್ಡ ಚಾಲೆಂಜ್, ಕಷ್ಟ ಕೂಡ ಆಗುತ್ತದೆ. ಆದರೂ ಕೂಡ ರಿಸ್ಕ್​​ ತೆಗೆದುಕೊಂಡು ಈ ಸೌಲಭ್ಯ ಕಲ್ಪಿಸುತ್ತೇವೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details