ಕರ್ನಾಟಕ

karnataka

ETV Bharat / state

ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರಾದೇಶಿಕ ಆಯುಕ್ತ ಪ್ರಕಾಶ್​​​ ತಿರುಗೇಟು

ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊರಡಿಸಿದ 4 ಆದೇಶಗಳ‌ ಬಗ್ಗೆ ತನಿಖೆ ನಡೆಯುತ್ತಿದೆ. ಶಾಸಕರು ಸಾ.ರಾ. ಚೌಲ್ಟ್ರಿ ಬಗ್ಗೆ ಮನವಿ ಮಾಡಿದ್ದರಿಂದ ತನಿಖೆಗೆ ಆದೇಶಿಸಿದ್ದೇನೆ ಎಂದು ಪ್ರಾದೇಶಿಕ ಆಯುಕ್ತ ಜಿ.ಸಿ‌.ಪ್ರಕಾಶ್ ತಿಳಿಸಿದ್ದಾರೆ.

Regional Commissioner GC Prakash
ಪ್ರಾದೇಶಿಕ ಆಯುಕ್ತ ಜಿ.ಸಿ‌.ಪ್ರಕಾಶ್

By

Published : Jun 11, 2021, 7:24 PM IST

ಮೈಸೂರು: ಶಾಸಕ ಸಾ.ರಾ.ಮಹೇಶ್ ಹಾಗೂ ಪ್ರಾದೇಶಿಕ ಆಯುಕ್ತ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ವಿಧಾನ ಪರಿಷತ್ ಸದಸ್ಯ ಹೆಚ್‌.ವಿಶ್ವನಾಥ್ ಹೇಳಿಕೆಗೆ ಪ್ರಾದೇಶಿಕ ಆಯುಕ್ತ ಜಿ.ಸಿ‌.ಪ್ರಕಾಶ್ ತಿರುಗೇಟು ನೀಡಿದರು.

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಹಿಂದಿನ ದಿನವೇ ಶಾಸಕರು ನಮಗೇ ಮನವಿ ಕೊಟ್ಟಿದ್ದರು. ಮನವಿ ಆಧಾರದ ಮೇಲೆ ನಾನು ತನಿಖಾ ಸಮಿತಿ ರಚಿಸಿದ್ದೇನೆ.

ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರಾದೇಶಿಕ ಆಯುಕ್ತರ ತಿರುಗೇಟು

ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊರಡಿಸಿದ ನಾಲ್ಕೂ ಆದೇಶಗಳ‌ ಬಗ್ಗೆ ತನಿಖೆ ನಡೆಯುತ್ತಿದೆ. ಶಾಸಕರು ಸಾ.ರಾ. ಚೌಲ್ಟ್ರಿ ಬಗ್ಗೆ ಮನವಿ ಮಾಡಿದ್ದರಿಂದ ತನಿಖೆಗೆ ಆದೇಶಿಸಿದ್ದೇನೆ. ಯಾವುದೇ ಭೂ ಅಕ್ರಮಗಳ ಬಗ್ಗೆ ದೂರು ಬಂದರೂ ತನಿಖೆ ಮಾಡುತ್ತೇವೆ ಎಂದರು. ರಾಜಕಾಲುವೆ ಸೇರಿದಂತೆ ರೋಹಿಣಿ ಸಿಂಧೂರಿ ಪತ್ರದ ಭೂ ಅಕ್ರಮ ತನಿಖೆಗೆ ಆದೇಶ ಮಾಡಲಾಗಿದೆ. ಸಾ.ರಾ. ಚೌಲ್ಟ್ರಿ ವಿವಾದ ಅಷ್ಟೇ ಅಲ್ಲ. ಎಲ್ಲವೂ ತನಿಖೆ ಆಗುತ್ತಿದೆ ಎಂದರು.

ಸಾ.ರಾ. ಕಲ್ಯಾಣ ಮಂಟಪ ಸರ್ವೆ:

ಸಾ.ರಾ. ಕಲ್ಯಾಣ ಮಂಟಪ ವಿವಾದ ವಿಚಾರವಾಗಿ ಕಲ್ಯಾಣ ಮಂಟಪದ ಬಳಿ ಎಸಿ ವೆಂಕಟರಾಜು ಹಾಗೂ ತಹಶೀಲ್ದಾರ್ ರಕ್ಷಿತ್ ನೇತೃತ್ವದಲ್ಲಿ ಸರ್ವೆ ನಡೆದಿದೆ.

ಓದಿ:ಪ್ರಾದೇಶಿಕ ಆಯುಕ್ತರ ವರದಿ ಬಗ್ಗೆ ನಂಬಿಕೆಯಿಲ್ಲ: ಹೆಚ್. ವಿಶ್ವನಾಥ್

ABOUT THE AUTHOR

...view details