ಮೈಸೂರು: ಮೈಸೂರು ರೈಲ್ವೆ ವಿಭಾಗವು ಕಳೆದ ಎಂಟು ತಿಂಗಳ ಅವಧಿಯಲ್ಲಿ ಒಟ್ಟು 7.242 ದಶಲಕ್ಷ ಟನ್ ಸರಕು ಸಾಗಣೆ ಮಾಡಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. 2023ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಒಟ್ಟು 7.242 ದಶಲಕ್ಷ ಟನ್ (MT)ಗಳಷ್ಟು ಸರಕನ್ನು ವಿಭಾಗದ ವ್ಯಾಪ್ತಿಯಲ್ಲಿ ಸಾಗಾಟ ಮಾಡಿದೆ. ಇದು ಕಳೆದ ವರ್ಷಕ್ಕಿಂತ 1.700 ದಶಲಕ್ಷ ಟನ್ ಹೆಚ್ಚು ಎಂದು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಸರಕು ಸಾಗಣೆಯಲ್ಲಿ ಗಣನೀಯ ಹೆಚ್ಚಳ :ಮೈಸೂರು ವಿಭಾಗವು ಪ್ರಸ್ತುತ ವರ್ಷ ಸರಕು ಸಾಗಣೆಯಲ್ಲಿ 1.700 ದಶಲಕ್ಷ ಟನ್ ಹೆಚ್ಚಳವನ್ನು ದಾಖಲಿಸಿದೆ. ಇದು ಕಳೆದ 2022ರ ನವೆಂಬರ್ ತಿಂಗಳವರೆಗಿನ ಸರಕು ಸಾಗಾಟಕ್ಕಿಂತ ಶೇ.30.68ರಷ್ಟು ಹೆಚ್ಚಳ ದಾಖಲಿಸಿದೆ.
ಆದಾಯದಲ್ಲೂ ಹೆಚ್ಚಳ :ವಿಭಾಗವು 2023ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಸರಕು ಸಾಗಣೆಯಿಂದ 620.20 ಕೋಟಿ ಆದಾಯ ಗಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 171.54 ಕೋಟಿ ಹೆಚ್ಚುವರಿ ಆದಾಯವನ್ನು ಗಳಿಸಿದೆ. ನವೆಂಬರ್ 2023ರಲ್ಲಿ ವಿಭಾಗವು 1.029 ದಶಲಕ್ಷ ಟನ್ ಸರಕು ಸಾಗಣೆಯನ್ನು ಮಾಡಿದ್ದು, ಕಳೆದ ವರ್ಷಕ್ಕಿಂತ ಶೇ 53.13ರಷ್ಟು ಹೆಚ್ಚಳ ಕಂಡಿದೆ. ಜೊತೆಗೆ ಸರಕು ಸಾಗಣೆಯಿಂದ 79.88 ಕೋಟಿ ರೂ ಹೆಚ್ಚುವರಿ ಆದಾಯ ಬಂದಿದ್ದು, 2022ರ ನವೆಂಬರ್ಗಿಂತ ಶೇ. 29.68ರಷ್ಟು ಹೆಚ್ಚು ಆದಾಯವನ್ನು ಗಳಿಸಿದೆ.