ಕರ್ನಾಟಕ

karnataka

ETV Bharat / state

ವಿಶ್ವನಾಥ್​ ಟೀಕೆಯಿಂದ ಬೇಜಾರಾಗಿ ನಾನು ಸೆ.18ರಂದೇ ರಾಜೀನಾಮೆ ನೀಡಿದೆ: ಶಾಸಕ ಸಾ.ರಾ. ಮಹೇಶ್​ - ಮೈಸೂರು ಸುದ್ದಿ

ನನ್ನ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡಿದ್ದಕ್ಕಾಗಿ ನಾನು ಸೆ. 18 ರಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ರಾಜ್ಯದ ಮುಂದೆ ಕ್ಷಮೆ ಕೇಳುತ್ತೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

ಮಾಜಿ ಸಚಿವ ಸಾ.ರಾ.ಮಹೇಶ್

By

Published : Oct 16, 2019, 12:43 PM IST

Updated : Oct 16, 2019, 3:12 PM IST

ಮೈಸೂರು:ನಾನಾಗಲಿ ನನ್ನ ಕುಟುಂಬದವರು ಆಗಲಿ ಯಾವುದೇ ಆಸೆ ಆಕಾಂಕ್ಷೆಗಳಿಗೆ ಬಲಿಯಾಗಿಲ್ಲ ಹಾಗೂ ಹಣ ಪಡೆದಿಲ್ಲ ಎಂದು ಚಾಮುಂಡಿ ಬೆಟ್ಟದಲ್ಲಿ ಬಂದು ಅರ್ನಹ ಶಾಸಕ ಹೆಚ್. ವಿಶ್ವನಾಥ್ ಪ್ರಮಾಣ ಮಾಡಿದರೆ, ನಾನು ರಾಜ್ಯದ ಜನತೆಯನ್ನು ಕ್ಷಮೆಯಾಚಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಾ.ರಾ. ಮಹೇಶ್ ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವ ಸಾ.ರಾ.ಮಹೇಶ್

ಇಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾ.ರಾ ಮಹೇಶ್, ನಿನ್ನೆ ಅನರ್ಹ ಶಾಸಕ ಹೆಚ್.ವಿಶ್ವನಾಥ್, "ನಾಳೆ ಬೆಳಗ್ಗೆ 9 ಗಂಟೆಗೆ ಸಾ.ರಾ.ಮಹೇಶ್ ಬಂದು ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಲಿ ಎಂದು ಹಾಕಿದ್ದ ಸವಾಲನ್ನು ಒಪ್ಪಿಕೊಳ್ಳುತ್ತೇನೆ ಎಂದರು.

ಮಾಜಿ ಸಚಿವ ಸಾ.ರಾ.ಮಹೇಶ್
ನನ್ನ ಬಗ್ಗೆ ಹೆಚ್. ವಿಶ್ವನಾಥ್ ವೈಯಕ್ತಿಕ ಟೀಕೆ ಮಾಡಿದ್ದರು. ಇದರಿಂದ ಮನನೊಂದು ಸೆಪ್ಟೆಂಬರ್ 18 ರಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ . ಇನ್ನೂ ರಾಜೀನಾಮೆ ವಾಪಸ್ ಪಡೆದಿಲ್ಲ. ಈ ಬಗ್ಗೆ ನನ್ನನ್ನು ಕೆಲವರು ಮನವೊಲಿಸಿಲು ಪ್ರಯತ್ನಿಸಿದ್ದರು ಎಂದರು.
ಮಾಜಿ ಸಚಿವ ಸಾ.ರಾ.ಮಹೇಶ್

ನಾಳೆ ಹೆಚ್. ವಿಶ್ವನಾಥ್ ಚಾಮುಂಡಿ ಬೆಟ್ಟಕ್ಕೆ ಬರುವಾಗ ಮಾಜಿ ಪತ್ರಕರ್ತರು ಹಾಗೂ ಹಾಲಿ ಮುಖ್ಯಮಂತ್ರಿಗಳ ಪತ್ರಿಕಾ ಸಲಹೆಗಾರರಾದ ಮರಕಲ್ ಅವರನ್ನು ಕರೆದುಕೊಂಡು ಬಂದರೆ ಎಲ್ಲಾ ವಿಚಾರ ಗೊತ್ತಾಗಲಿದೆ. ಇನ್ನು ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಹೆಚ್.ವಿಶ್ವನಾಥ್ ಆಗಲಿ ಅವರ ಕುಂಟುಬದ ಯಾವ ವ್ಯಕ್ತಿಯೂ ಅಭ್ಯರ್ಥಿ ಆಗುವುದಿಲ್ಲ ಹೊರಗಿನ ವ್ಯಕ್ತಿ ಬಿಜೆಪಿಯ ಅಭ್ಯರ್ಥಿಗಳಾಗಿದ್ದಾರೆ. ಆದರೂ ಹೆಚ್.ವಿಶ್ವನಾಥ್ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗುತ್ತಾರೆ ಎಂದರು.

Last Updated : Oct 16, 2019, 3:12 PM IST

ABOUT THE AUTHOR

...view details