ಕರ್ನಾಟಕ

karnataka

ETV Bharat / state

ಶ್ರೀ ರಾಮ ಸಹಕಾರ ಸಕ್ಕರೆ ಕಾರ್ಖಾನೆ ಮುರುಗೇಶ್ ನಿರಾಣಿ ತೆಕ್ಕೆಗೆ.. ?

ಇಂದು ಪಾಂಡವಪುರ ಸಕ್ಕರೆ ಕಾರ್ಖಾನೆ ಉದ್ಘಾಟನೆಯ ಹಿನ್ನೆಲೆಯಲ್ಲಿ ಶಾಸಕ ಹಾಗೂ ಉದ್ಯಮಿ ಮುರುಗೇಶ್.ಆರ್ ನಿರಾಣಿ ಕುಟುಂಬ ಸಮೇತ ಬೆಳಗ್ಗೆ ಚಾಮುಂಡಿ ತಾಯಿಯ ದರ್ಶನ ಪಡೆದ ಅವರು ನಂತರ ಕೆ.ಆರ್.ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

MLA Murugesh. R Nirani
ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭ

By

Published : Aug 11, 2020, 2:08 PM IST

ಮೈಸೂರು: ಸತತ ನಷ್ಟದಲ್ಲಿರುವ ಕೆ.ಆರ್. ನಗರ ತಾಲೂಕಿನ ಶ್ರೀ ರಾಮ‌ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆಯ ಟೆಂಡರ್​​ನಲ್ಲಿ ಮುರುಗೇಶ್ ನಿರಾಣಿ ಅವರು ಒಬ್ಬರೇ ಟೆಂಡರ್ ಹಾಕಿದ್ದು, ಸಂಪುಟ ಅನುಮತಿ ಸಿಕ್ಕ ತಕ್ಷಣ ಕಾರ್ಖಾನೆಯನ್ನು ಗುತ್ತಿಗೆ ಪಡೆದು ಆರಂಭಿಸಲಾಗುವುದು ಎಂದು ಶಾಸಕ ಹಾಗೂ ಉದ್ಯಮಿ ಮುರುಗೇಶ್.ಆರ್ ನಿರಾಣಿ ತಿಳಿಸಿದರು.

ಕುಟುಂಬ ಸಮೇತ ಚಾಮುಂಡಿ ತಾಯಿಯ ದರ್ಶನ ಪಡೆದ ಉದ್ಯಮಿ ಮುರುಗೇಶ್.ಆರ್ ನಿರಾಣಿ

ಇಂದು ಪಾಂಡವಪುರ ಸಕ್ಕರೆ ಕಾರ್ಖಾನೆ ಉದ್ಘಾಟನೆಯ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಬೆಳಗ್ಗೆ ಚಾಮುಂಡಿ ತಾಯಿಯ ದರ್ಶನ ಪಡೆದ ಅವರು ನಂತರ ಕೆ.ಆರ್.ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಕೃಷ್ಣ ಜನ್ಮಾಷ್ಟಾಮಿ. ಈ ಶುಭ ದಿನದಂದು ಪಾಂಡವಪುರ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಲಾಗುತ್ತಿದ್ದು, ಕಳೆದ 4 ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದ್ದು, ಇದನ್ನು ಟೆಂಡರ್ ಮೂಲಕ ಪಡೆಯಲಾಗಿದೆ. ಈ ವರ್ಷದಿಂದಲೇ ಇದನ್ನು ನುರಿತ ಇಂಜಿನಿಯರ್​​ಗಳ‌ ಸಹಾಯದಿಂದ ರಿಪೇರಿ ಮಾಡಿಸಿ ಕಬ್ಬನ್ನು ಅರೆಯಲಾಗುವುದು. 5,000 ಟನ್ ಕಬ್ಬನ್ನು ಅರೆಯುವ ಸಾಮರ್ಥ್ಯವನ್ನು ಹೊಂದಿರುವ ಪಾಂಡವಪುರ ಸಕ್ಕರೆ ಕಾರ್ಖಾನೆಯ ಒಳಗಡೆ ಕಬ್ಬು ಅರೆಯುವುದರ ಜೊತೆಗೆ ವಿದ್ಯುತ್, ಡಿಶ್ಲರಿ, ಸ್ಯಾನಿಟೈಸರ್, ಇಥೆನಾಲ್ ಉತ್ಪಾದನೆಗೆ ಒತ್ತು ನೀಡಲಾಗುವುದು. ಆದಾಯದ ಶೇ70 ರಷ್ಟು ರೈತರಿಗೆ ಕೊಡಲಾಗುವುದು ಎಂದು ಮುರುಗೇಶ್ ನಿರಾಣಿ ತಿಳಿಸಿದರು.

ಪಾಂಡವಪುರ ಸಕ್ಕರೆ ಕಾರ್ಖಾನೆ ಉದ್ಘಾಟನೆ..

ಶ್ರೀ ರಾಮ‌ ಸಹಕಾರ ಸಕ್ಕರೆ ಕಾರ್ಖಾನೆ ಆರಂಭ: ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಶ್ರೀ ರಾಮ ಸಹಕಾರ ಸಕ್ಕರೆ ಕಾರ್ಖಾನೆ ಹಲವು ದಿನಗಳಿಂದ ಕಬ್ಬು ಅರೆಯುವುದನ್ನು ನಿಲ್ಲಿಸಿದ್ದು, ಈ ಕಾರ್ಖಾನೆ ಟೆಂಡರ್​​ನಲ್ಲಿ ನಾನು‌ ಭಾಗವಹಿಸಿದ್ದೆ. 125 ಕೋಟಿಗೆ ಸಿಂಗಲ್ ಬಿಡ್ ಮಾಡಲಾಗಿದ್ದು, ಸಂಪುಟದ ಅನುಮತಿ ಸಿಕ್ಕ ನಂತರ ಆ ಕಾರ್ಖಾನೆಯನ್ನು ಗುತ್ತಿಗೆ ಪಡೆದು ರೈತರು ಜನಪ್ರತಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಖಾನೆ ಪ್ರಾರಂಭ‌ ಮಾಡಲು ಪ್ರಯತ್ನಿಸುವುದಾಗಿ ಮುರುಗೇಶ್. ಆರ್. ನಿರಾಣಿ ತಿಳಿಸಿದರು.

ಉದ್ಯಮಿ ಮುರುಗೇಶ್.ಆರ್ ನಿರಾಣಿ

ಇಂದು ಪಾಂಡವಪುರಕ್ಕೆ ಸಕ್ಕರೆ ಕಾರ್ಖಾನೆಯ ಪುನರ್ ಆರಂಭಕ್ಕೆ ಹೊರಡುವ ಮುನ್ನ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯ ಮುಂದೆ ನಿಂತು ಮುರುಗೇಶ್.ಆರ್ ನಿರಾಣಿ ಗೌಡರ ಗೆಟೆಪ್‌ನಲ್ಲಿ ಫೋಟೋ ತೆಗೆಸಿಕೊಂಡರು.

ABOUT THE AUTHOR

...view details