ಮೈಸೂರು: ಜೆಡಿಎಸ್ ಶಾಸಕರನ್ನು ಆಣೆ ಮಾಡಲು ದೇವಸ್ಥಾನಕ್ಕೆ ಕರೆದ ಸಂಸದೆ ಸುಮಲತಾ ಹೇಳಿಕೆಗೆ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ದಾರೆ.
ಸಂಸದೆ ಸುಮಲತಾ, ಜೆಡಿಎಸ್ ಶಾಸಕರನ್ನು ಆಣೆ ಮಾಡಲು ದೇವಾಲಯಕ್ಕೆ ಕರೆದ ವಿಚಾರವಾಗಿ ತಿರುಗೇಟು ನೀಡಿರುವ ಅವರು, ದೆವ್ವ ಕರೆಯುತ್ತದೆ ಎಂದು ದೇವಾಲಯಕ್ಕೆ ಹೋಗೋಕೆ ಆಗುತ್ತದಾ, ಜೆಡಿಎಸ್ ಶಾಸಕರು ದೇವರನ್ನು ನಂಬುವವರು ದಿನ ಬೆಳಗಾದರೆ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ನಮ್ಮನ್ನು ಆಣೆ ಪ್ರಮಾಣಕ್ಕೆ ಕರೆಯೊದಕ್ಕೆ ಇವರು ಯಾರು, ಇದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗುತ್ತಿದೆ. ದೆವ್ವ ಕರೆದರೆ ನಾವು ಹೋಗಲು ಸಾಧ್ಯವೇ ಎಂದು ತಿರುಗೇಟು ನೀಡಿದ್ದಾರೆ.