ಮೈಸೂರು:ವಿಶ್ವನಾಥ್ ಕಾಂಗ್ರೆಸ್ನಲ್ಲಿದ್ದಾಗ ಕಾಂಗ್ರೆಸ್ ನಮ್ಮ ತಾಯಿ ಎನ್ನುತ್ತಿದ್ದರು, ಜೆಡಿಎಸ್ಗೆ ಬಂದಾಗ ದೇವೇಗೌಡರು ನಮ್ಮ ತಂದೆ ಸಮಾನ ಎನ್ನುತ್ತಿದ್ದರು. ಈಗ ಬಿಜೆಪಿಗೆ ಹೋಗಿರುವ ವಿಶ್ವನಾಥ್ ಯಾರ ಮಗು ಎಂದು ತಿಳಿಸಲಿ ಎಂದು ಜೆಡಿಎಸ್ನ ರಾಜ್ಯವಕ್ತಾರ ರವಿಚಂದ್ರೇಗೌಡ ಪ್ರಶ್ನಿಸಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಿಠಾಯಿ ತೋರಿಸಿದವರ ಕಡೆ ಹೋಗುವ ಮಗು ಜೆಡಿಎಸ್ ಎಂದು ವಿಶ್ವನಾಥ್ ಹೇಳುತ್ತಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಇದ್ದು ಬಿಜೆಪಿಗೆ ಹೋಗಿದ್ದಿರಾ.? ಈಗ ನರೇಂದ್ರ ಮೋದಿ ಏನಾಗಬೇಕು..? ಬಿಜೆಪಿಯವರು ಬಾಂಬೆಗೆ ಕರೆದುಕೊಂಡು ಹೋದಾಗ ಯಾವ ಮಿಠಾಯಿ ತಿನ್ನಿಸಿದರು ಎಂಬುದನ್ನು ತಿಳಿಸಿ ಎಂದು ಲೇವಡಿ ಮಾಡಿದರು.