ಮೈಸೂರು: ಕಳೆದ ತಿಂಗಳು ನಗರದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಗುರುತು ಪತ್ತೆ ಹಚ್ಚಲು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಸಂತ್ರಸ್ತೆ ಆಗಮಿಸಿದ್ದಾಳೆ.
ಈಗಾಗಲೇ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹೇಳಿಕೆ ದಾಖಲಿಸಿರುವ ಸಂತ್ರಸ್ತೆ, ಇಂದು ಜೈಲಿನಲ್ಲಿರುವ ಆರೋಪಿಗಳ ಗುರುತು ಪತ್ತೆಹಚ್ಚುವ ಕಾರ್ಯಕ್ಕೆ ಹಾಜರಾಗಿದ್ದಾಳೆ.