ಮೈಸೂರು: ಪೂಜೆ ಮಾಡಿದರೆ ವಿವಾಹವಾಗುತ್ತದೆ ಎಂದು ಯುವತಿಯನ್ನು ನಂಬಿಸಿ, ಧರ್ಮಗುರುವೊಬ್ಬ ಆಕೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವ ಆರೋಪ ಪ್ರಕರಣ ಹುಣಸೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಹುಣಸೂರಲ್ಲಿ 'ಅಧರ್ಮ' ಕೃತ್ಯ: 'ಧರ್ಮ'ಗುರುವಿನಿಂದ ಯುವತಿಯ ಮೇಲೆ ಅತ್ಯಾಚಾರ..! - Mysore mysore latest news
ಧರ್ಮಗುರುವೊಬ್ಬ ಯುವತಿಯೊಬ್ಬಳನ್ನು ಕರೆದೊಯ್ದ ಅತ್ಯಾಚಾರವೆಸಗಿ ಪರಾರಿಯಾಗಿರುವ ಆರೋಪ ಪ್ರಕರಣ ಹುಣಸೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಪೂಜೆ ಮಾಡಿದರೆ ವಿವಾಹವಾಗುತ್ತದೆ ಎಂದು ಯುವತಿಯನ್ನು ನಂಬಿಸಿ ಈ ಪೈಶಾಚಿಕ ಕೃತ್ಯ ಎಸಗಿದ್ದಾನೆ.

'ಧರ್ಮ'ಗುರುವಿನಿಂದ ಯುವತಿಯ ಮೇಲೆ ಅತ್ಯಾಚಾರ..!
ಚಿಲ್ಕುಂದ ಗ್ರಾಮದ ಯುವತಿ ಅತ್ಯಾಚಾರಗೊಳಗಾಗಿದ್ದು, ಹುಣಸೂರಿನ ಲಾಲ್ಬನ್ ಬೀದಿಯ ವಾಸಿ, ಹೈರಿಗೆ ಗ್ರಾಮದ ಮಸೀದಿಯ ಧರ್ಮಗುರು ಜಬೀವುಲ್ಲಾ ಎಂಬಾತ ಪ್ರಕರಣದ ಆರೋಪಿ.
ಧರ್ಮಗುರುವಿನ ಪೈಶಾಚಿಕ ಕೃತ್ಯದಿಂದ ನೊಂದ ಯುವತಿ, ತನ್ನ ತಂದೆಗೆ ಘಟನೆ ಬಗ್ಗೆ ತಿಳಿಸಿದ್ದಾಳೆ. ಯುವತಿಯ ತಂದೆಯು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಧರ್ಮಗುರುವಿನ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.