ಮೈಸೂರು:ರಂಗಾಯಣಕ್ಕೆ ಸರ್ಕಾರ ಕೊಡುವ ಅನುದಾನವನ್ನು ನೋಡಿ ನಾನೇ ಗಾಬರಿಗೊಂಡೆ ಸರ್ಕಾರದಿಂದ ಬರುವ ಅನುದಾನ ಬಹಳ ಕಡಿಮೆ ಇದೆ ಎಂದು ನಿರ್ದೇಶಕ ಅಡಂಡ್ಡ.ಸಿ.ಕಾರ್ಯಪ್ಪ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಸರ್ಕಾರದ ಅನುದಾನ ಸಾಲುತ್ತಿಲ್ಲ : ರಂಗಾಯಣ ನಿರ್ದೇಶಕರ ಅಸಮಾಧಾನ - Mysore Rangayana Director Addenda.Kariyappa
ರಂಗಾಯಣಕ್ಕೆ ಸರ್ಕಾರದಿಂದ ಬರುತ್ತಿರುವ ಅನುದಾನ ತುಂಬಾ ಕಡಿಮೆ ಇದೆ. ಈ ಅನುದಾನದಲ್ಲಿ ರಂಗಾಯಣ ನಡೆಸುವುದು ತುಂಬಾ ಕಷ್ಟ. ಬಹುರೂಪಿ ನಾಟಕೋತ್ಸವಕ್ಕೆ 1 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕೆಂದು ಸಚಿವ ಸಿ.ಟಿ. ರವಿಯವರಿಗೆ ಕೇಳಿದ್ದೇನೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡಂಡ್ಡ.ಸಿ.ಕಾರ್ಯಪ್ಪ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
![ಸರ್ಕಾರದ ಅನುದಾನ ಸಾಲುತ್ತಿಲ್ಲ : ರಂಗಾಯಣ ನಿರ್ದೇಶಕರ ಅಸಮಾಧಾನ Rangayana director Dissatisfaction](https://etvbharatimages.akamaized.net/etvbharat/prod-images/768-512-5884780-thumbnail-3x2-hrs.jpg)
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ರಂಗಾಯಣಕ್ಕೆ ಸರ್ಕಾರದಿಂದ ಬರುತ್ತಿರುವ ಅನುದಾನ ತುಂಬಾ ಕಡಿಮೆ ಇದೆ. ಈ ಅನುದಾನದಲ್ಲಿ ರಂಗಾಯಣ ನಡೆಸುವುದು ತುಂಬಾ ಕಷ್ಟ. ಬಹುರೂಪಿ ನಾಟಕೋತ್ಸವಕ್ಕೆ 1 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕೆಂದು ಸಚಿವ ಸಿ.ಟಿ ರವಿಯವರಿಗೆ ಕೇಳಿದ್ದೇನೆ. ರಾಜ್ಯದ 4 ರಂಗಾಯಣದಲ್ಲಿ ಮೈಸೂರು ರಂಗಾಯಣ ಬಹಳ ದೊಡ್ಡದು, ಇತರ ರಂಗಾಯಣಗಳಿಗೆ ಇದನ್ನು ಹೋಲಿಸಬಾರದು. ಸರ್ಕಾರ ನಮ್ಮ ರಂಗಾಯಣಕ್ಕೆ ಕೊಡುವ ಅನುದಾನ ನೋಡಿ ನಾನೇ ಗಾಬರಿಗೊಂಡೆ ಹೆಚ್ಚುವರಿ ಹಣ ಬರಲು ನಾನು ರಾಜಕೀಯ ವ್ಯಕ್ತಿಗಳಂತೆ ಹೋರಾಡುತ್ತಿದ್ದೇನೆ ಎಂದರು.
ಪ್ರತಿ ವರ್ಷ ಬಹುರೂಪಿಗೆ 1 ಕೋಟಿ ಹಣ ಕೊಡಬೇಕು ಒಟ್ಟು ರಂಗಾಯಣಕ್ಕೆ 9 ಕೋಟಿ ಹಣ ನೀಡಬೇಕೆಂದು ಸರ್ಕಾರವನ್ನು ಕೇಳಿದ್ದೇವೆ ಎಂದು ಹೇಳಿದರು.