ಮೈಸೂರು: ನಗರದ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಅನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಲು ಸರ್ಕಾರ ಚಿಂತಿಸಿದೆ ಎಂದು ಸಚಿವ ಭೈರತಿ ಬಸವರಾಜು ಹೇಳಿಕೆ ನೀಡಿದ್ದರು. ಇದಕ್ಕೆ ಪಾರಂಪರಿಕ ಸಮಿತಿಯ ಸದಸ್ಯ ಪ್ರೋ.ರಂಗರಾಜು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ದೇವರಾಜ ಮಾರುಕಟ್ಟೆ ಕೆಡವದಂತೆ ಹೈಕೋರ್ಟ್ನಲ್ಲಿ 2 ಕೇಸ್ಗಳು ಇವೆ. ಇದನ್ನು ತಿಳಿಯದೆ 100 ಕೋಟಿ ವೆಚ್ಚದಲ್ಲಿ ಮಾರುಕಟ್ಟೆಯನ್ನು ಪುನರ್ ನಿರ್ಮಾಣ ಮಾಡಲು ಹೊರಟಿರುವುದು ಸರಿಯಲ್ಲ. 10 ಕೋಟಿ ನೀಡಿದರೆ ಅದನ್ನು 50 ವರ್ಷ ಬಾಳಿಕೆ ಬರುವ ರೀತಿಯಲ್ಲಿ ಯೋಗ್ಯವಾಗಿ ಸಂರಕ್ಷಣೆ ಮಾಡಬಹುದು ಎಂದರು.