ಕರ್ನಾಟಕ

karnataka

ETV Bharat / state

ಮೈಸೂರು: ರಾಜ್ಯದಲ್ಲೇ ಮೊದಲ ಬಿಎಸ್​​ಎನ್​ಎಲ್​ ವೈ-ಫೈ ಸೇವೆ ಪಡೆದ ಗ್ರಾಮ ರಮ್ಮನಹಳ್ಳಿ - first BSNL Wi-Fi service village rammanahalli

ಬಿಎಸ್​ಎನ್​ಎಲ್ ವತಿಯಿಂದ ಸಾರ್ವಜನಿಕ ವೈ-ಫೈ ನೀತಿಯಡಿ ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ದತ್ತಾಂಶ ಕೇಂದ್ರವನ್ನ ಸ್ಥಾಪನೆ ಮಾಡಲಾಗಿದೆ.

mysore-is-the-first-bsnl-wi-fi-service-village-in-the-state
ರಮ್ಮನಹಳ್ಳಿ

By

Published : Mar 2, 2022, 3:32 PM IST

Updated : Mar 2, 2022, 5:16 PM IST

ಮೈಸೂರು: ದೂರಸಂಪರ್ಕ ಸೇವಾ ಸಂಸ್ಥೆ ಭಾರತ್ ಸಂಚಾರ್ ನಿಗಮ ನಿಯಮಿತವು (ಬಿಎಸ್‌ಎನ್‌ಎಲ್) ಸಾರ್ವಜನಿಕ ವೈ-ಫೈ ನೀತಿಯಡಿ ರಾಜ್ಯದಲ್ಲಿ ಮೊದಲ `ಸಾರ್ವಜನಿಕ ದತ್ತಾಂಶ ಕೇಂದ್ರ'ವನ್ನು (ಪಿಡಿಒ) ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಸ್ಥಾಪಿಸಿದೆ. ಈ ನಿರಂತರ ಹೈಸ್ಪೀಡ್ ಇಂಟರ್‌ನೆಟ್ ಸಂಪರ್ಕಕ್ಕೆ ಬಿಎಸ್‌ಎನ್‌ಎಲ್ ಮಂಡಳಿಯ ನಿರ್ದೇಶಕ ವಿವೇಕ್ ಬನ್ಸಾಲ್ ಅವರು ಮಂಗಳವಾರ ಚಾಲನೆ ನೀಡಿದರು.

ಬಿಎಸ್​​ಎನ್​ಎಲ್​ ವೈ-ಫೈ ಸೇವೆಗೆ ಚಾಲನೆ

ಬಿಎಸ್​ಎನ್​ಎಲ್ ವತಿಯಿಂದ ಸಾರ್ವಜನಿಕ ವೈ-ಫೈ ನೀತಿಯಡಿ ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ದತ್ತಾಂಶ ಕೇಂದ್ರವನ್ನ ಸ್ಥಾಪನೆ ಮಾಡಲಾಗಿದೆ.

ಇದಕ್ಕೆ ಚಾಲನೆ ನೀಡಿದ ನಂತರ ಬಿಎಸ್​ಎನ್​ಎಲ್​​ ನಿರ್ದೇಶಕ ವಿವೇಕ್ ಬನ್ಸಾಲ್ ಮಾತನಾಡಿ, ಈಗಾಗಲೇ ಹಲವಾರು ಹಳ್ಳಿಗಳಲ್ಲಿ ವೈ-ಫೈ ಸೌಲಭ್ಯ ಇದೆ. ಆದರೆ, ಇಡೀ ಗ್ರಾಮಕ್ಕೆ ಇಂಟರ್​​ನೆಟ್​ ಸೌಲಭ್ಯ ಒದಗಿಸಿರುವುದು ಇದೇ ಮೊದಲನೇ ಬಾರಿಗೆ ಎಂದರು.

ಈ ಹಳ್ಳಿಯಲ್ಲಿ 100ರಷ್ಟು ವೈ-ಫೈ ವಿಸ್ತಾರಗೊಂಡಿದೆ. ನಗರಗಳ‌ ಬಡಾವಣೆಗಳಂತೆ ಅತ್ಯಂತ ಕಡಿಮೆ ವೆಚ್ಚದಲ್ಲಿ ವೇಗದ ಇಂಟರ್ನೆಟ್ ಸೌಲಭ್ಯವನ್ನು ಈ ಹಳ್ಳಿ ಪಡೆದುಕೊಂಡಿದೆ ಎಂದು ತಿಳಿಸಿದರು. ರಮ್ಮನಹಳ್ಳಿ ಮಾದರಿಯಲ್ಲಿ ಇನ್ನಿತರ ಹಳ್ಳಿಗಳಲ್ಲೂ ಪಿಡಿಒ ಸ್ಥಾಪನೆ ಮಾಡಿ ವೇಗದ ಇಂಟರ್​ನೆಟ್ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.

ಇಂಟರ್​ನೆಟ್​ ಸಹಾಯದಿಂದ ಅನೇಕ ಕೆಲಸಗಳು ಆಗುತ್ತವೆ. ಮಕ್ಕಳ ಆನ್​ಲೈನ್​ ಕ್ಲಾಸ್, ವರ್ಕ್ ಫ್ರಮ್ ಹೋಮ್ ಸೇರಿದಂತೆ ಅನೇಕ ಕೆಲಸಗಳು ಇಂಟರ್ನೆಟ್ ಸಂಪರ್ಕದಿಂದ ಆಗುತ್ತವೆ. ಹೀಗಾಗಿ, ಕಡಿಮೆ ದರದಲ್ಲಿ ವೇಗದ ಇಂಟರ್​ನೆಟ್​ ಸೌಲಭ್ಯ ಬೇಕಾಗಿದೆ. ಇದು ದೂರಸಂಪರ್ಕ ಇಲಾಖೆ ಗ್ರಾಹಕರ ಬೇಡಿಕೆಯನ್ನು ಈಡೇರಿಸುತ್ತದೆ ಎಂದರು.

ನಂತರ ಮಾತನಾಡಿದ ಬಿಎಸ್​ಎನ್​ಎಲ್ ಕರ್ನಾಟಕ ಟೆಲಿಕಾಂ ವೃತ್ತದ ಮುಖ್ಯ ಜನರಲ್ ಮ್ಯಾನೇಜರ್ ದೇವೇಶ್ ಕುಮಾರ್, ಮೈಸೂರು ನಗರಕ್ಕೆ ರಮ್ಮನಹಳ್ಳಿ ಹತ್ತಿರವಿದ್ದರೂ ಇಲ್ಲಿ ಇಂಟರ್​ನೆಟ್​ ಸಮಸ್ಯೆ ಇತ್ತು. ಹಾಗಾಗಿ, ಈ‌ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಪಿಡಿಒ ಸ್ಥಾಪನೆ ಮಾಡಲಾಗಿದೆ ಎಂದರು. ಬಹಳಷ್ಟು ಅರಣ್ಯ ಪ್ರದೇಶದ ಗ್ರಾಮಗಳು ಹಾಗೂ ಇತರ ಗ್ರಾಮಾಂತರ ಪ್ರದೇಶಗಳಲ್ಲಿ ನೆಟ್ ಸಮಸ್ಯೆಗಳು ಇವೆ. ಅದಕ್ಕೆ ಪಿಡಿಒ ಸ್ಥಾಪನೆ ಪರಿಹಾರ ಎಂದು ತಿಳಿಸಿದರು.

ಪ್ರಯೋಗಗಳೇನು..10 ಸಾವಿರ ಜನಸಂಖ್ಯೆ ಇರುವ ರಮ್ಮನಹಳ್ಳಿ ಗ್ರಾಮಕ್ಕೆ ತಡೆರಹಿತ ವೇಗದ ಇಂಟರ್​ನೆಟ್​ ಸೌಲಭ್ಯ ಲಭ್ಯವಾಗಲಿದೆ. 50 ಎಂಬಿಪಿಎಸ್ ವೇಗದವರೆಗೆ ಕಡಿಮೆ ದರದಲ್ಲಿ ಇಂಟರ್​ನೆಟ್​ ಸೌಲಭ್ಯ ಪಡೆಯಬಹುದು. ಒಂದು ದಿನಕ್ಕೆ ಒಂದು ಜಿಬಿ ನೆಟ್​ಗೆ 9 ರೂ, ಎರಡು ದಿನಕ್ಕೆ 2 ಜಿಬಿ 19 ರೂ, 7 ದಿನಕ್ಕೆ 7 ಜಿಬಿಗೆ 39 ರೂ. 15 ದಿನಕ್ಕೆ 15 ಜಿಬಿ ನೆಟ್​ಗೆ 59 ರೂ ಹಾಗೂ 30 ದಿನಕ್ಕೆ 69 ರೂಪಾಯಿಗಳಿಗೆ ನೆಟ್ ಸೌಲಭ್ಯ ದೊರೆಯಲಿದೆ.

ಓದಿ:ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಸಿಕ್ತು ಜನಬೆಂಬಲ..

Last Updated : Mar 2, 2022, 5:16 PM IST

For All Latest Updates

TAGGED:

ABOUT THE AUTHOR

...view details