ಕರ್ನಾಟಕ

karnataka

ETV Bharat / state

ಸಂಪುಟ ವಿಸ್ತರಣೆ ಅಷ್ಟೇ, ರೀಷಫಲ್ ಪ್ಲಾನ್‌ ಇಲ್ಲ, ಇಲ್ಲ - ಸಚಿವಾಕಾಂಕ್ಷಿಗಳಿಗೆ ಮೈಸೂರಿನಲ್ಲಿ ಸಿದ್ದು ತಣ್ಣೀರು - undefined

ಜೂನ್ 1ಕ್ಕೆ ಬಿಜೆಪಿ ಸರ್ಕಾರ ಬರುತ್ತದೆಂದು ಯಡಿಯೂರಪ್ಪ ಹೇಳ್ತಾನೆ ಇದ್ದಾರೆ. ಜೂನ್ 1ಕ್ಕೆ ಸರ್ಕಾರ ಬರದಿದ್ದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಲಿ‌ ಎಂದು ವಾಗ್ದಾಳಿ ನಡೆಸಿದ್ದಾರೆ ಸಿದ್ದರಾಮಯ್ಯ.

ಸಿದ್ದರಾಮಯ್ಯ

By

Published : May 27, 2019, 1:14 PM IST

ಮೈಸೂರು:ರಮೇಶ್ ಜಾರಕಿಹೊಳಿ ಸೇರಿದಂತೆ ಯಾರೂ ಬಿಜೆಪಿಗೆ ಹೋಗುವುದಿಲ್ಲ. ಇದೆಲ್ಲ ಊಹಾಪೋಹ ಎಂದು ಮೈಸೂರು ವಿಮಾನ ನಿಲ್ದಾಣದಲ್ಲಿ‌ ಮಾಜಿ‌ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಇಂದು ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ, ಮಾಧ್ಯಮಗಳ ಜೊತೆ ಮಾತನಾಡಿ, ಸಂಪುಟ ವಿಸ್ತರಣೆ ಇಲ್ಲ. ಖಾತೆಗಳ ಬದಲಾವಣೆಯೂ ಇಲ್ಲ. ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ. ನಮ್ಮಲ್ಲಿ ಖಾಲಿ ಇರುವ ಒಂದು ಸಚಿವ ಸ್ಥಾನ ಶೀಘ್ರವೇ ಭರ್ತಿ ಮಾಡುತ್ತೇವೆ.

ಎರಡು ಸ್ಥಾನ ಜೆಡಿಎಸ್‌ನಲ್ಲಿ ಖಾಲಿ ಇದ್ದು, ಅವರು ಭರ್ತಿ ಮಾಡುತ್ತಾರೋ ಇಲ್ಲವೋ ನಮ್ಗೆ ಗೊತ್ತಿಲ್ಲ ಎಂದ ಸಿದ್ದರಾಮಯ್ಯ, ಲೋಕಸಭಾ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪು ಲೋಕಸಭಗೆ ವಿಧಾನಸಭೆಗೆ ಹಾಗೂ ಸ್ಥಳೀಯ ಚುನಾವಣೆಗೆ ಒಂದೊಂದು ರೀತಿ ಇರುತ್ತದೆ ಎಂದ ಸಿದ್ದರಾಮಯ್ಯ, ಈ ಫಲಿತಾಂಶ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡುವುದಿಲ್ಲ:

ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟು ಹೋಗುವುದಿಲ್ಲ, ಕಾಂಗ್ರೆಸ್​ನಲ್ಲೇ ಇರುತ್ತಾರೆ. ‌ಸುಧಾಕರ್ ಮನೆಗೆ ಜಾರಕಿಹೊಳಿ ನಿನ್ನೆ ಹೋಗಿದ್ದಾಗ ಡಾ. ಸುಧಾಕರ್ ಕೃಷ್ಣ ಅವರ ಮನೆಗೆ ಹೋಗುವುದಾಗಿ ಹೇಳಿದ್ದರು. ಇಬ್ಬರೂ ಜೊತೆಯಲ್ಲಿ ಹೋದಾಗ ಅಲ್ಲಿ ಯಡಿಯೂರಪ್ಪ, ಆರ್‌.ಅಶೋಕ್, ಸುಮಲತಾ ಬರುವುದು ತಿಳಿದಿರಲಿಲ್ಲ. ಒಟ್ಟಾಗಿ ಕೃಷ್ಣಾ ಅವರ ಮನೆಯಲ್ಲಿ ಸಿಕ್ಕಿರುವುದು ಕಾಕತಾಳೀಯ. ಯಾರೊಬ್ಬರೂ ಬಿಜೆಪಿಗೆ ಹೋಗುವುದಿಲ್ಲ. ರಮೇಶ್ ಜಾರಕಿಹೊಳಿ ಸಹ ಬಿಜೆಪಿಗೆ ಹೋಗುವುದಿಲ್ಲ ಇದೆಲ್ಲ ಊಹಾಪೋಹ ಎಂದರು.

ಯಡಿಯೂರಪ್ಪ ಒಂದು ವರ್ಷದಿಂದ ಸರ್ಕಾರ ಹೋಗುತ್ತದೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಇನ್ನೂ ಲೋಕಸಭಾ ಚುನಾವಣೆ ಫಲಿತಾಂಶ ನಂತರ ಜೂನ್ 1ಕ್ಕೆ ಬಿಜೆಪಿ ಸರ್ಕಾರ ಬರುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಜೂನ್ 1ಕ್ಕೆ ಸರ್ಕಾರ ಬರದಿದ್ದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಲಿ‌ ಎಂದು ಸಿದ್ದರಾಮಯ್ಯ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿಯ ಸೋಲಿನ ಬಗ್ಗೆ ಸ್ಥಳೀಯ ಮುಖಂಡರನ್ನು ಕರೆದು ಸುದೀರ್ಘವಾಗಿ ವಿಶ್ಲೇಷಣೆ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದರು. ಈಗಲೂ ಇವಿಎಂ ಬಗ್ಗೆ ಅನುಮಾನವಿದೆ. ಆದರೂ ಜನರ ತೀರ್ಪಿಗೆ ತಲೆಬಾಗುತ್ತೇನೆ ಎಂದು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details