ಮೈಸೂರು: ವಿಶ್ವ ತಾಯಂದಿರ ದಿನಾಚರಣೆ ಹಿನ್ನೆಲೆ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಮಹಿಳೆಯರ ಪಾದಪೂಜೆ ಮಾಡುವ ಮೂಲಕ ತಮ್ಮ ತಾಯಿಯನ್ನು ನೆನೆದಿದ್ದಾರೆ.
ಸಾಧಕ ಮಹಿಳೆಯರ ಪಾದಪೂಜೆ ಮಾಡಿದ ಶಾಸಕ ರಾಮದಾಸ್
ಸಾಧಕ ಮಹಿಳೆಯರ ಪಾದಪೂಜೆ ಮಾಡಿ ಶಾಸಕ ರಾಮದಾಸ್ ತಮ್ಮ ತಾಯಿಯನ್ನು ನೆನೆದಿದ್ದಾರೆ.
ಸಾಧಕ ಮಹಿಳೆಯರ ಪಾದ ಪೂಜೆ ಮಾಡಿದ ರಾಮದಾಸ್
ಶಾಸಕರ ಕಚೇರಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ತಾಯಂದರಿಗೆ ಪಾದಪೂಜೆ ಮಾಡಿ ರಾಮದಾಸ್ ಉಡುಗೊರೆ ನೀಡಿದರು. ನಾನು ಜೀವನದಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇಷ್ಟೊಂದು ಎತ್ತರಕ್ಕೆ ಬೆಳೆಯಲು ನನ್ನ ತಾಯಿ ತೋರಿದ ಮಾರ್ಗದರ್ಶನ ಹಾಗೂ ಮೌಲ್ಯ ಕಾರಣ. ಮಕ್ಕಳನ್ನು ಹಾಗೂ ಸಮಾಜವನ್ನು ತಿದ್ದಲು ತಾಯಿಗಿಂತ ದೊಡ್ಡ ಶಕ್ತಿ ಬೇರೆ ಇಲ್ಲ ಎಂದರು.