ಕರ್ನಾಟಕ

karnataka

ETV Bharat / state

ಜನತಾ ಕರ್ಫ್ಯೂಗೆ ಸಹಕಾರ ನೀಡಿ: ವಿಡಿಯೋ ಮೂಲಕ ಶಾಸಕ ರಾಮದಾಸ್ ಮನವಿ - ಶಾಸಕ ಎಸ್.ಎ.ರಾಮದಾಸ್ ಮನವಿ

ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸ್ವತಃ ವಿಡಿಯೋ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂಗೆ ನಾವೆಲ್ಲಾ ಸಹಕಾರಿಸೋಣ ಎಂದು ಕರೆ ನೀಡಿದ್ದಾರೆ.

MLA Ramadas
ಶಾಸಕ ಎಸ್.ಎ.ರಾಮದಾಸ್

By

Published : Mar 21, 2020, 6:07 PM IST

ಮೈಸೂರು:ಪ್ರಧಾನಿ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂನಲ್ಲಿ ಎಲ್ಲರೂ ಭಾಗವಹಿಸಿ, ಸಹಕಾರ ನೀಡಿ ಎಂದು ಶಾಸಕ ರಾಮದಾಸ್ ವಿಡಿಯೋ ಮಾಡಿ ಜನರಲ್ಲಿ ಮನವಿ ಮಾಡಿದ್ದಾರೆ.

ಶಾಸಕ ಎಸ್.ಎ.ರಾಮದಾಸ್

ಭಾನುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಮನೆಯಿಂದ ಹೊರ ಬರದಂತೆ ಮನೆಯಲ್ಲಿಯೇ ಇದ್ದು ಕರ್ಫ್ಯೂನಲ್ಲಿ ಭಾಗಿಯಾಗೋಣ. ಈ ಸಮಯದಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ತಂಡಕ್ಕೆ ಸಂಜೆ ಚಪ್ಪಾಳೆ, ಜಾಗಟೆ ಬಾರಿಸುವುದರ ಮೂಲಕ ಅವರಿಗೆ ಧನ್ಯವಾದ ಸಲ್ಲಿಸೋಣ ಎಂದು ವಿಡಿಯೋ ಮೂಲಕ ಶಾಸಕರು ಮನವಿ ಮಾಡಿದ್ದಾರೆ.

ABOUT THE AUTHOR

...view details