ಮೈಸೂರು:ಸುಯೇಜ್ ಫಾರಂವಿಚಾರದಲ್ಲಿ ಸಂಸದ ಪ್ರತಾಪ ಸಿಂಹ ಹಾಗೂ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನಡುವೆ ಮಾತಿನ ಚಕಮಕಿ ನಡೆದಿದೆ.
ಕಸ ವಿಲೇವಾರಿ ವಿಚಾರದಲ್ಲಿ ಶಾಸಕ-ಸಂಸದನ ನಡುವೆ ವಾಕ್ಸಮರ - ರಾಮ್ದಾಸ್-ಪ್ರತಾಪ್ ಸಿಂಹ ವಾಕ್ಸಮರ
ಇಂದು ಮೈಸೂರಿನಲ್ಲಿ ನಡೆದ ನಗರಾಭಿವೃದ್ಧಿಗೆ ಸಂಬಂಧಿಸಿದ ಚರ್ಚೆಯಲ್ಲಿ ಶಾಸಕ ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ನಡುವ ಮಾತಿನ ಚಕಮಕಿ ನಡೆದಿದೆ.

ಮುಡಾ ಕಚೇರಿಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನಗರಾಭಿವೃದ್ಧಿ ಬಗ್ಗೆ ಚರ್ಚೆ ನಡೆಸಲು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ಕರೆದಿದ್ದರು. ಈ ವೇಳೆ ಸುಯೇಜ್ ಫಾರಂ ಕಸ ವಿಲೇವಾರಿಗೆ ವರ್ಕ್ ಆರ್ಡರ್ ಆಗಿದೆ ಎಂದು ಸಂಸದ ಪ್ರತಾಪ ಸಿಂಹ ವಾದಿಸಿದಾಗ, ಆರ್ಡರ್ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದು ರಾಮದಾಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರಿಗೆ ಸುಯೋಜ್ ಫಾರಂ ವಿಚಾರವಾಗಿ ಶಾಸಕ ರಾಮದಾಸ್ ಮಾಹಿತಿ ನೀಡುತ್ತಿದ್ದ ವೇಳೆ ಸಂಸದ ಪ್ರತಾಪ್ ಸಿಂಹ ಮಧ್ಯ ಪ್ರವೇಶಿಸಿದಾಗ ಚರ್ಚೆಯಲ್ಲಿ ಗೊಂದಲ ಉಂಟಾಯಿತು.