ಕರ್ನಾಟಕ

karnataka

ETV Bharat / state

ವಿಶ್ವ ದಾಖಲೆ ನಿರ್ಮಿಸಿದ್ದ ಯೋಗಪಟು ಕುಮಾರಿ ಖುಷಿಗೆ ರಾಜ್ಯೋತ್ಸವ ಪ್ರಶಸ್ತಿ

ವಿವಿಧ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಗೆದ್ದಿರುವ ಮೈಸೂರು ಮೂಲದ ಖುಷಿ 2019ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.

ಖುಷಿಗೆ ರಾಜ್ಯೋತ್ಸವ ಪ್ರಶಸ್ತಿ

By

Published : Oct 28, 2019, 10:03 PM IST

ಮೈಸೂರು:ಯೋಗದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ವಿಶ್ವ ದಾಖಲೆ ನಿರ್ಮಿಸಿದ್ದ ಕುಮಾರಿ ಖುಷಿಗೆ 2019ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ವಿವಿಧ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಗೆದ್ದಿರುವ ಮೈಸೂರು ಮೂಲದ ಖುಷಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಯೋಗಪಟು ಕುಮಾರಿ ಖುಷಿ
ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಖುಷಿ ಉಸಿರಾಟ ತೊಂದರೆಯಿಂದ ಯೋಗ ಅಭ್ಯಾಸವನ್ನು ಮಾಡಲು ಆರಂಭಿಸಿದ್ದಳು. ಈಗ ದೇಶದ ಉತ್ತಮ ಯೋಗಾ ಪಟುಗಳಲ್ಲಿ ಒಬ್ಬರಾಗಿದ್ದು, 2007ರಲ್ಲಿ ಮೈಸೂರಿನ ನೋಟು ಮುದ್ರಣಾಲಯ ಸಮುದಾಯ ಭವನದಲ್ಲಿ ನೀರಾಳಂಬ ಪೂರ್ಣಚಕ್ರಸಾನವನ್ನು ಒಂದು ನಿಮಿಷಕ್ಕೆ 14 ಬಾರಿ ಮಾಡಿ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಳು.
ಯೋಗಪಟು ಕುಮಾರಿ ಖುಷಿಗೆ ರಾಜ್ಯೋತ್ಸವ ಪ್ರಶಸ್ತಿ

ಅಲ್ಲದೇ ಅನೇಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ದೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪಡೆದಿರುವ ಖುಷಿ 6 ಬಾರಿ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾಳೆ. ಇನ್ನು 2018-19ರಲ್ಲಿ ಸ್ವಚ್ಛ ಭಾರತ್ ಅಭಿಯಾನಕ್ಕೆ ಮೈಸೂರಿನ ರಾಯಭಾರಿಯಾಗಿದ್ದಾಳೆ.

ABOUT THE AUTHOR

...view details