ಮೈಸೂರು: ಜಯ ಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಫೆಬ್ರವರಿ 20ರಂದು ಅವರು ಸಂಗೀತದ ಮೇಲೆ ರಚಿಸಿರುವ ಕೃತಿಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ರಾಜ ವಂಶಸ್ಥೆ ಶ್ರೀ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಜಯ ಚಾಮರಾಜೇಂದ್ರ ಒಡೆಯರ್ ರಚಿಸಿದ ಕೃತಿ ಬಿಡುಗಡೆಗೆ ಸಿದ್ಧ.. - Rajamata Shri Pramodadevi odeyar press meet
ಜಯ ಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಫೆಬ್ರವರಿ 20ರಂದು ಅವರು ಸಂಗೀತದ ಮೇಲೆ ರಚಿಸಿರುವ ಕೃತಿಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ರಾಜ ವಂಶಸ್ಥೆ ಶ್ರೀ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ರಾಜ ವಂಶಸ್ಥೆ ಶ್ರೀ ಪ್ರಮೋದಾದೇವಿ ಒಡೆಯರ್ ಸುದ್ದಿಗೋಷ್ಠಿ
ಅರಮನೆಯಲ್ಲಿ ಮಾತನಾಡಿದ ಅವರು, ಮೈಸೂರು ವಿಶ್ವ ವಿದ್ಯಾನಿಲಯದಲ್ಲಿರುವ ಸೆನೆಟ್ ಭವನದಲ್ಲಿ ಜಯರಾಂ ರಮೇಶ್ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ರಾಜಕೀಯ ಗಣ್ಯರು ಹಾಗೂ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. 500 ಪುಟಗಳನ್ನು ಹೊಂದಿರುವ ಈ ಪುಸ್ತಕವನ್ನು ಕನ್ನಡ ಹಾಗೂ ದೇವನಗರಿ ಭಾಷೆಯಲ್ಲಿ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ 'ಇ-ಬುಕ್' ಮಾಡುವ ಉದ್ದೇಶವಿದೆ ಎಂದರು. ಸೆನೆಟ್ ಭವನ ಹಾಗೂ ಜಗನ್ಮೋಹನ ಅರಮನೆಯಲ್ಲಿ ಪುಸ್ತಕಗಳು ದೊರೆಯುತ್ತವೆ ಎಂದರು.