ಮೈಸೂರು:ದೀಪಾವಳಿ ಹಬ್ಬಕ್ಕೆ ಮುನ್ನವೇ ಸಾಂಸ್ಕೃತಿಕ ನಗರಿಯಲ್ಲಿ ಮಳೆಯ ಆಗಮನವಾಗಿದ್ದು, ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಆಗಮಿಸಿದ ಜನರಿಗೆ ತೊಂದರೆಯಾಗಿದೆ.
ಸಾಂಸ್ಕೃತಿಕ ನಗರಿಯಲ್ಲಿ ವರುಣ ಆಗಮನ.. ಪಟಾಕಿ ಖರೀದಿಗೆ ಬಂದ ಜನರಿಗೆ ಅಡಚಣೆ.. - mysore rainfall news 2020
ಸಾಂಸ್ಕೃತಿಕ ನಗರಿಗೆ ವರುಣನ ಆಗಮನವಾಗಿದೆ. ಇದರಿಂದಾಗಿ ದೀಪಾವಳಿ ಹಬ್ಬಕ್ಕೆ ಖರೀದಿಗಾಗಿ ಬಂದ ಜನರಿಗೆ ತೊಂದರೆಯಾಗಿದ್ದು, ಮಾರುಕಟ್ಟೆ, ಸಂತಪೇಟೆ ಹಾಗೂ ಜೆ.ಕೆ.ಗ್ರೌಂಡ್ ನಲ್ಲಿ ಪಟಾಕಿ ಖರೀದಿಗೆ ಬಂದ ಜನರು ಪರದಾಡಿದ್ದಾರೆ..
ಮೈಸೂರು
ಇಂದು ಮಧ್ಯಾಹ್ನವೇ ಸಾಂಸ್ಕೃತಿಕ ನಗರಿಗೆ ವರುಣನ ಆಗಮನವಾಗಿದೆ. ಇದರಿಂದಾಗಿ ಹಬ್ಬಕ್ಕೆ ಖರೀದಿಗಾಗಿ ಬಂದ ಜನರಿಗೆ ತೊಂದರೆಯಾಗಿದ್ದು, ಮಾರುಕಟ್ಟೆ, ಸಂತಪೇಟೆ ಹಾಗೂ ಜೆ.ಕೆ.ಗ್ರೌಂಡ್‌ನಲ್ಲಿ ಪಟಾಕಿ ಖರೀದಿಗೆ ಬಂದ ಜನರಿಗೆ ಮಳೆ ಅಡಚಣೆ ಮಾಡಿದೆ.
ಇದಲ್ಲದೆ ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರ, ಕುವೆಂಪು ನಗರ, ವಿಜಯನಗರ, ಹೆಬ್ಬಾಳ ಸೇರಿದಂತೆ ನಗರದಲ್ಲಿ ಮಳೆ ಸುರಿಯುತ್ತಿದ್ದು,ಮಧ್ಯಾಹ್ನವೇ ಚಳಿ ವಾತಾವರಣ ಸೃಷ್ಟಿಯಾಗಿದೆ.