ಕರ್ನಾಟಕ

karnataka

ETV Bharat / state

ಸಾಂಸ್ಕೃತಿಕ ನಗರಿಯಲ್ಲಿ ರೈಲ್ವೆ ಕೋಚ್ ಕೆಫೆ: ಏನಿದರ ವಿಶೇಷತೆ? ಇಲ್ಲಿದೆ ನೋಡಿ..

ಮೈಸೂರು ರೈಲ್ವೆ ಇದೀಗ ರೈಲ್ವೆ ಮ್ಯೂಸಿಯಂ ಒಳಗೆ ಹಳೆಯ ರೈಲು ಕೋಚ್​​ನಿಂದ ರೈಲ್ ಕೋಚ್ ಕೆಫೆ ಅನ್ನು ಹೆರಿಟೇಜ್ ಮಾದರಿಯಲ್ಲಿ ನಿರ್ಮಾಣ ಮಾಡಿದ್ದು ಈ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

railway coach cafe
ರೈಲ್ವೆ ಕೋಚ್ ಕೆಫೆ

By

Published : Jun 24, 2020, 4:16 PM IST

ಮೈಸೂರು:ನಗರದಲ್ಲಿರುವ ಹೆರಿಟೇಜ್ ರೈಲ್ವೆ ಮ್ಯೂಸಿಯಂನಲ್ಲಿರುವ ಹಳೆಯ ರೈಲ್ವೆ ಕೋಚ್ ಕೆಫೆಯೊಂದು ನಿರ್ಮಾಣವಾಗಿದೆ. ಈ ಹೆರಿಟೇಜ್ ರೈಲ್ ಕೋಚ್ ಕೆಫೆ ಇಷ್ಟವಾದ ತಿಂಡಿ ತಿನಿಸುಗಳನ್ನು ತಿನ್ನಬಹುದಾಗಿದೆ.

ರೈಲ್ವೆ ಕೋಚ್ ಕೆಫೆ

ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಕೋಚ್ ಅನ್ನು ಇಲ್ಲಿಗೆ ತಂದು ಒಳಗೆ ಇದ್ದ ಎಲ್ಲಾ ಹಳೆಯ ಕೋಚ್​ಗಳ ಸಾಮಗ್ರಿಗಳನ್ನು ತೆಗೆದು, ಆ ಕೋಚ್ ನನ್ನು ಹೆರಿಟೇಜ್ ಮಾದರಿಯ ವಸ್ತುಗಳಾದ ಹಳೆಯ ಕಾಲದ ಹಂಚು, ಪಿಂಗಾಣಿ ಪಾತ್ರೆಗಳು, ಪಾರಂಪರಿಕ ಕಾಫಿ ಕಪ್​​ಗಳು ಸೇರಿದಂತೆ ಹಲವು ವಸ್ತುಗಳನ್ನು ಇಟ್ಟು ಕೆಫೆಯನ್ನು ನಿರ್ಮಿಸಲಾಗಿದೆ.

ಮ್ಯೂಸಿಯಂ ನೋಡಲು ಬಂದ ಜನ ಇಲ್ಲಿಗೆ ಬಂದು ತಿಂಡಿ ತಿಂದು ಹೋಗುತ್ತಾರೆ. ಮಕ್ಕಳಂತೂ ಕೋಚ್ ಕೆಫೆಯನ್ನು ತುಂಬಾ ಇಷ್ಟ ಪಡುತ್ತಾರೆ ಎನ್ನುತ್ತಾರೆ ಇದನ್ನು ನಿರ್ಮಾಣ ಮಾಡಿದ ರೈಲ್ವೆ ಅಧಿಕಾರಿ ಶಾಂತಿಬಾಬು.

ABOUT THE AUTHOR

...view details