ಮೈಸೂರು:ಜನವರಿ 9 ರಂದು ರಾಜ್ಯದಲ್ಲಿ ಎರಡನೇ ಹಂತದ ಚಳವಳಿಯನ್ನ ಆರಂಭ ಮಾಡಲಿದ್ದೇವೆ. ಕರ್ನಾಟಕದ ಎಲ್ಲ ಕಡೆ ರೈಲು ಸೇವೆಯನ್ನು ಬಂದ್ ಮಾಡಲಾಗುವುದು ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಇಂದು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ನಂತರ ಈಟಿವಿ ಭಾರತದ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ಮರಾಠ ಪ್ರಾಧಿಕಾರ ಬೇಡ ಅಂತ ಹೇಳಿ ರಾಜ್ಯಾದ್ಯಂತ ಈಗಾಗಲೇ ಬಂದ್ ಮಾಡಲಾಗಿದೆ. ಆದರೂ ಸರ್ಕಾರ ಪ್ರಾಧಿಕಾರವನ್ನ ವಾಪಸ್ ಪಡೆಯಲಿಲ್ಲ. ಇದರಿಂದ ಎರಡನೇ ಹಂತದ ಚಳವಳಿಯನ್ನು ಇಡೀ ರಾಜ್ಯಾದ್ಯಂತ ಆರಂಭ ಮಾಡಲಿದ್ದು, ಜನವರಿ 9ರಂದು ಇಡೀ ಕರ್ನಾಟಕದ್ಯಾಂತ ರೈಲು ಸೇವೆ ಬಂದ್ ಆಗಲಿದೆ. ಕನ್ನಡಪರ ಸಂಘಟನೆಗಳಿಂದ ರೈಲ್ವೆ ಹಳಿಯ ಮೇಲೆ ಕುಳಿತು ಹೋರಾಟ ಮಾಡಲಾಗುತ್ತದೆ. ಎರಡನೇ ಬಾರಿ ಎಚ್ಚರಿಕೆ ನೀಡುತ್ತೇವೆ, ಮರಾಠ ಪ್ರಾಧಿಕಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸುತ್ತೇವೆ ಎಂದರು.