ನೈಋತ್ಯ ರೈಲ್ವೆ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ರಾಹುಲ್ ಅಗರ್ವಾಲ್ - ನೈಋತ್ಯ ರೈಲ್ವೆಯ ವಿಭಾಗೀಯ ರೈಲ್ವೆಗೆ ಹೊಸ ವ್ಯವಸ್ಥಾಪಕರ ನೇಮಕ ಸುದ್ದಿ
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ನೂತನ ರೈಲ್ವೆ ವ್ಯವಸ್ಥಾಪಕರಾಗಿ ಶ್ರೀ ರಾಹುಲ್ ಅಗರ್ವಾಲ್ ಅಧಿಕಾರ ವಹಿಸಿಕೊಂಡಿದ್ದಾರೆ.ಇವರು ರೈಲ್ವೆ ಕಾರ್ಯಾಚರಣೆ ಮತ್ತು ನಿರ್ವಹಣೆಯ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕ ಶ್ರೇಣಿಯ ಅನುಭವವನ್ನು ಹೊಂದಿದ್ದಾರೆ..
![ನೈಋತ್ಯ ರೈಲ್ವೆ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ರಾಹುಲ್ ಅಗರ್ವಾಲ್ Rahul Agarwal takes charge as new Divisional Railway Manager of SWR](https://etvbharatimages.akamaized.net/etvbharat/prod-images/768-512-9329519-992-9329519-1603795463201.jpg)
ಮೈಸೂರು
ಮೈಸೂರು: ನೈಋತ್ಯ ರೈಲ್ವೆಯ ಹೊಸ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ರಾಹುಲ್ ಅಗರ್ವಾಲ್ ಅಧಿಕಾರ ವಹಿಸಿಕೊಂಡರು.
ರಾಹುಲ್ ಅಗರ್ವಾಲ್ ಅವರು ರೈಲ್ವೆ ಕಾರ್ಯಾಚರಣೆ ಮತ್ತು ನಿರ್ವಹಣೆಯ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕ ಶ್ರೇಣಿಯ ಅನುಭವವನ್ನು ಹೊಂದಿದ್ದು, ನವದೆಹಲಿಯ ರೈಲ್ವೆ ಮಂಡಳಿಯಲ್ಲಿ ಸಂಚಾರ ಸಾರಿಗೆ (ಉಕ್ಕು) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ಉತ್ತರ ಮಧ್ಯೆ ರೈಲ್ವೆಯಲ್ಲಿ ಮುಖ್ಯ ಪ್ರಯಾಣಿಕರ ಸಂಚಾರ ವ್ಯವಸ್ಥಾಪಕರಾಗಿ ಹಾಗು ಸರಕು ಮಾರಾಟ ವಿಭಾಗದ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀಮತಿ ಅಪರ್ಣ ಗರ್ಗ್ ಅವರು ಬೆಂಗಳೂರಿನ ಯಲಹಂಕ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ಪ್ರಧಾನ ಹಣಕಾಸು ಸಲಹೆಗಾರರಾಗಿ ವರ್ಗಾವಣೆ ಆಗಿದ್ದಾರೆ.