ಮೈಸೂರು: ಭಾರತ ಜೋಡೋ ಯಾತ್ರೆಯು ಸೆ. 30ರಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸಲಿದೆ. ಈ ವೇಳೆ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಆದಿವಾಸಿ ಜನರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಹೇಳಿದರು.
ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿಂದು ಮಾತನಾಡಿದ ಅವರು, ಸೆ. 18ರ ಕಾರ್ಯಕರ್ತರ ಸಭೆ ಮತ್ತು ಸೆ. 30ರ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು. ರಾಹುಲ್ ಗಾಂಧಿ ಅವರು ಸೆ. 30ರಂದು ಬೆಳಗ್ಗೆ 9.30 ಕ್ಕೆ ಊಟಿ, ಗುಡ್ಲೂರು ಮಾರ್ಗವಾಗಿ ಚಾಮರಾಜನಗರ ಜಿಲ್ಲೆ ಪ್ರವೇಶ ಮಾಡಲಿದ್ದಾರೆ.
ಬೇಗೂರು ಕ್ರಾಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇಲ್ಲಿ ಮೂಲ ನಿವಾಸಿಗಳಾದ ಜೇನು ಕುರುಬರು, ಸೋಲಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಗುಂಡ್ಲುಪೇಟೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು 20 ಸಾವಿರ ಜನರನ್ನು ಸೇರಿಸಲಾಗುವುದು ಎಂದರು.
ಸೆ. 1 ರಂದು ನಂಜನಗೂಡು ತಾಲೂಕಿನ ಕಳಲೆ ಗೇಟ್‌ಗೆ ಮಧ್ಯಾಹ್ನ ತಲುಪಲಿದ್ದಾರೆ. ತಾಂಡವಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ವಾಸ್ತವ್ಯಕ್ಕೂ ಮುನ್ನ ಕಾರ್ನರ್ ಮೀಟಿಂಗ್ನಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಯಾರೊಂದಿಗೆ ಸಂವಾದ ನಡೆಸಬೇಕು ಎಂಬುದನ್ನು ಸೆ. 18ರ ಸಭೆ ಬಳಿಕ ನಿರ್ಧರಿಸಲಾಗುವುದು ಎಂದು ಹೇಳಿದರು.