ಮೈಸೂರು:ಗ್ರಾಮ ದೇವತೆ ಹಬ್ಬದ ಆಚರಣೆ ವೇಳೆ ಗುಂಪು ಘರ್ಷಣೆಯುಂಟಾಗಿ, ಯುವಕರು ಹೊಡೆದಾಡಿಕೊಂಡು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮೈಸೂರು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಗ್ರಾಮದಲ್ಲಿ ನಿನ್ನೆ ರಾತ್ರಿ ಗ್ರಾಮ ದೇವತೆ ಹಬ್ಬದಂದು ನೃತ್ಯ ಮಾಡುವಾಗ ಘರ್ಷಣೆಯುಂಟಾಗಿ, ಮಾತಿಗೆ ಮಾತು ಬೆಳೆದು ಎರಡೂ ಗುಂಪಿನ ಯುವಕರು ಮಾರಕಾಸ್ತ್ರ ಹಿಡಿದು ಹೊಡೆದಾಡಿಕೊಂಡಿದ್ದಾರೆ.