ಮೈಸೂರು: ಪೆಟ್ರೋಲ್ ಹಾಕಲು ಬಂದವರ ನಡುವೆ ಉಂಟಾದ ವಾಗ್ವಾದ ತಾರಕಕ್ಕೇರಿ ಕೊನೆಗೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ನಗರದ ಮೆಟ್ರೋ ಪೋಲ್ ಬಳಿಯ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.
ಮೈಸೂರಿನ ಪೆಟ್ರೋಲ್ ಬಂಕ್ನಲ್ಲಿ ಎರಡು ಗುಂಪುಗಳ ನಡುವೆ ಜಗಳ: ಪೊಲೀಸರಿಂದ ಲಘು ಲಾಠಿ ಚಾರ್ಜ್
ಪೆಟ್ರೋಲ್ ಹಾಕಲು ಬಂದವರ ನಡುವೆ ಉಂಟಾದ ವಾಗ್ವಾದ ತಾರಕಕ್ಕೇರಿ ಕೊನೆಗೆ ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ಮೈಸೂರು ನಗರದ ಮೆಟ್ರೋ ಪೋಲ್ ಬಳಿಯ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.
ಪೆಟ್ರೋಲ್ ಬಂಕ್ನಲ್ಲಿ ಎರಡು ಗುಂಪುಗಳ ನಡುವೆ ಜಗಳ
ಹೊಸ ವರ್ಷಾಚರಣೆ ಹಿನ್ನೆಲೆ ಮೆಟ್ರೋ ಪೋಲ್ ಬಳಿಯ ಪೆಟ್ರೋಲ್ ಬಂಕ್ನಲ್ಲಿ ಜನರು ಪೆಟ್ರೋಲ್ ಹಾಕಿಸಲು ಮುಗಿಬಿದ್ದಿದ್ದರು. ಹೀಗಾಗಿ ಬಂಕ್ನಲ್ಲಿ ಜನಜಂಗುಳಿಯೇ ನೆರೆದಿತ್ತು. ಈ ವೇಳೆ ಮದ್ಯಪಾನ ಮಾಡಿದ ಕಾರು ಚಾಲಕನೋರ್ವ ರಭಸವಾಗಿ ಬಂದು ಬಂಕ್ಗೆ ನುಗ್ಗಿದ್ದಾನೆ. ಈ ವೇಳೆ ಎರಡು ಬೈಕ್ಗಳು ಜಖಂಗೊಂಡಿದೆ.
ಹೀಗಾಗಿ ಬೈಕ್ ಸವಾರರು ಮತ್ತು ಕಾರು ಚಾಲಕನ ನಡುವೆ ಉಂಟಾದ ವಾಗ್ವಾದ ತಾರಕಕ್ಕೇರಿದ್ದು, ಕೊನೆಗೆ ಸ್ಥಳೀಯ ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.