ಕರ್ನಾಟಕ

karnataka

ETV Bharat / state

ಧಮ್ ಇದ್ರೆ ರಾಜ್ಯಕ್ಕೆ ಆಕ್ಸಿಜನ್​ ತರಿಸಿಕೊಳ್ಳಿ: ರಾಜ್ಯ ಬಿಜೆಪಿ ಸಂಸದರಿಗೆ ಡಾ.ಪುಷ್ಪಾ ಅಮರ್​ನಾಥ್ ಸವಾಲು - pushpa amaranath latest news

ತಾಕತ್ತಿದ್ದರೆ ಪ್ರಧಾನಿ ಮೋದಿ ಮುಂದೆ ಕೇಂದ್ರದಿಂದ ಹೆಚ್ಚಿನ ಆಕ್ಸಿಜನ್ ತರಿಸಿಕೊಳ್ಳಿ. ಕೊರೊನಾ ನಿಯಂತ್ರಣ ವಿಚಾರವಾಗಿ ಕೇಂದ್ರಕ್ಕೆ ಮನವರಿಕೆ ಮಾಡಿ ಎಂದು ಡಾ. ಪುಷ್ಪಾ ಅಮರನಾಥ್ ಸವಾಲು ಎಸೆದಿದ್ದಾರೆ.

pushpa
pushpa

By

Published : May 7, 2021, 4:50 PM IST

Updated : May 7, 2021, 5:39 PM IST

ಮೈಸೂರು: ರಾಜ್ಯ ಬಿಜೆಪಿ ಸಂಸದರೇ ನಿಮಗೆ ತಾಕತ್ತು, ಧಮ್ ಇದ್ಯಾ? ಇದ್ದರೆ ಪ್ರಧಾನಿ ಮೋದಿ ಮುಂದೆ ಹೋಗಿ ರಾಜ್ಯಕ್ಕಾಗಿರುವ ಅನ್ಯಾಯ ತಪ್ಪಿಸಿ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಸವಾಲು ಹಾಕಿದರು.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾಕತ್ತು, ಧಮ್ಮು ಇದ್ದರೆ ಕೇಂದ್ರದಿಂದ ಹೆಚ್ಚಿನ ಆಕ್ಸಿಜನ್ ತರಿಸಿಕೊಳ್ಳಿ. ಕೊರೊನಾ ನಿಯಂತ್ರಣ ವಿಚಾರವಾಗಿ ಕೇಂದ್ರಕ್ಕೆ ಮನವರಿಕೆ ಮಾಡಿ, ಹೆಚ್ಚಿನ ಪರಿಹಾರದ ಜೊತೆಗೆ ಅಗತ್ಯ ಕ್ರಮಗಳನ್ನ ಪೂರೈಸುವುದಕ್ಕೆ ಒತ್ತಡ ಹೇರಿ,ರಾಜ್ಯದ ಪರಿಸ್ಥಿತಿ ನೋಡಿ,ನಿಮ್ಮ‌ ಜನ್ಮಕ್ಕೆ ನಿಮಗೆಲ್ಲಾ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

ಧಮ್ ಇದ್ರೆ ರಾಜ್ಯಕ್ಕೆ ಆಕ್ಸಿಜನ್​ ತರಿಸಿಕೊಳ್ಳಿ: ರಾಜ್ಯ ಬಿಜೆಪಿ ಸಂಸದರಿಗೆ ಡಾ.ಪುಷ್ಪಾ ಅಮರ್​ನಾಥ್ ಸವಾಲು

ಕೊರೊನಾ ನಿಯಂತ್ರಿಸುವಲ್ಲಿ‌ ಕೇಂದ್ರ ಹಾಗೂ ರಾಜ್ಯ ಸಂಪೂರ್ಣ ವಿಫಲವಾಗಿದೆ. ಬಿಪಿಎಲ್ ಕಾರ್ಡುದಾರ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಿ. ನಿಮಗೆ ತಾಕತ್ತು ಇದ್ದರೆ ಈ ಕೆಲಸ ಮಾಡಿ,ಇಲ್ಲವಾದಲ್ಲಿ ರಾಜೀನಾಮೆ ನೀಡಿ ಮನಗೆ ಹೋಗಿ ಎಂದು ಕಿಡಿಕಾರಿದರು.

ಪಿಎಂ‌ ಕೇರ್ ಹಾಗೂ ಸಿಎಂ ಕೇರ್ ಫಂಡ್​ಗಳಿಗೆ ದಾನಿಗಳು ಹಣ ನೀಡಬೇಡಿ. ಅದೇ ಹಣವನ್ನು ಚಿಕಿತ್ಸೆಗಾಗಿ ಪರದಾಡುತ್ತಿರುವ ರೋಗಿಗಳಿಗೆ ನೀಡಿ. ಕಳೆದ ವರ್ಷ ಸಾವಿರಾರು ಕೋಟಿ ರೂ. ಪಿಎಂ ಹಾಗೂ ಸಿಎಂ ಕೇರ್​​ಗೆ ಹೋಗಿದೆ, ಅದರ ಲೆಕ್ಕವನ್ನು ಕೊಟ್ರಾ? ಎಂದು ಪ್ರಶ್ನಿಸಿದರು.

Last Updated : May 7, 2021, 5:39 PM IST

ABOUT THE AUTHOR

...view details