ಮೈಸೂರು:ಅಕಾಲಿಕವಾಗಿ ಪುತ್ರನನ್ನು ಕಳೆದುಕೊಂಡ ತಂದೆಯೊಬ್ಬ ಮೃತ ಮಗನ ಫೋಟೊಗೆ ಟಿಕೆಟ್ ಖರೀದಿಸಿ ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ನೋಡಿದ ಕುತೂಹಲಕಾರಿ ಘಟನೆ ನಗರದಲ್ಲಿ ನಡೆದಿದೆ.
ಕುವೆಂಪು ನಗರದ ನಿವಾಸಿ ಮುರಳೀಧರ್ ಅವರ ಪುತ್ರ ಹರಿಕೃಷ್ಣನ್ ಕಳೆದ ನಾಲ್ಕು ತಿಂಗಳ ಹಿಂದೆ ಸ್ನೇಹಿತನ ಜೊತೆ ವರುಣಾ ನಾಲೆಗೆ ಈಜಲು ಹೋಗಿ ಸಾವಿಗೀಡಾಗಿದ್ದ. ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಹರಿಕೃಷ್ಣನ್ ಯುವರತ್ನ ಸಿನಿಮಾ ನೋಡಲೇಬೇಕೆಂಬ ಆಸೆ ಇಟ್ಟುಕೊಂಡಿದ್ದನಂತೆ. ಹಾಗಾಗಿ ಮುರಳೀಧರ್ ಅವರು ಕುಟುಂಬ ಸಮೇತರಾಗಿ ಮಗನ ಫೋಟೊ ಇಟ್ಟುಕೊಂಡು ಸಿನಿಮಾ ನೋಡಿದರು.
ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ ತಂದೆ, ತಾಯಿ, ಯುವಕನ ಅಣ್ಣ ಸಿನಿಮಾ ವೀಕ್ಷಣೆ ಮಾಡಿದರು.