ಮೈಸೂರು:ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಪೇಪರ್ ಕಾರ್ಖಾನೆಗೆ ಹುಸಿ ಬಾಂಬ್ ಕರೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೇಪರ್ ಕಾರ್ಖಾನೆಗೆ ಹುಸಿ ಬಾಂಬ್ ಕರೆ: ಆರೋಪಿ ಅರೆಸ್ಟ್ - Man arrested for making pseudo-bomb threat to paper factory
ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ರಾಮ ಪೇಪರ್ ಕಾರ್ಖಾನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಅನಾಮಧೇಯ ಕರೆಯೊಂದು ಬಂದಿತ್ತು. ಈ ಹಿನ್ನೆಲೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು.
![ಪೇಪರ್ ಕಾರ್ಖಾನೆಗೆ ಹುಸಿ ಬಾಂಬ್ ಕರೆ: ಆರೋಪಿ ಅರೆಸ್ಟ್ pseudo-bomb call Accused arrest in Mysuru](https://etvbharatimages.akamaized.net/etvbharat/prod-images/768-512-6254713-thumbnail-3x2-hrs.jpg)
ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ರಾಮ ಪೇಪರ್ ಕಾರ್ಖಾನೆಗೆ ಬಾಂಬ್ ಇಡಲಾಗಿದೆ ಎಂದು ಅನಾಮಧೇಯ ಕರೆಯೊಂದು ಬಂದಿತ್ತು. ಈ ಹಿನ್ನೆಲೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ ಅದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಿದೆ. ಹೀಗಾಗಿ ಹುಸಿ ಬಾಂಬ್ ಕರೆ ಆಧಾರಿಸಿ ತನಿಖೆ ನಡೆಸಿದ ಸಿಸಿಬಿ ಮತ್ತು ನಂಜನಗೂಡಿನ ಪೊಲೀಸರು, ಕರೆ ಮಾಡಿದ್ದ ಆರೋಪಿ ಶಿಭೂ ಡಿ ಮ್ಯಾಥ್ಯೂ (35) ಎಂಬಾತನನ್ನು ಬಂಧಿಸಿದ್ದಾರೆ.
ಈತ ಈ ಹಿಂದೆ ಇದೇ ಪೇಪರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೆಲಸದ ವೇಳೆ ಗಲಾಟೆ ಮಾಡಿದ್ದಕ್ಕಾಗಿ ಮೂರು ತಿಂಗಳ ಹಿಂದೆ ಈತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತಂತೆ. ಈ ದ್ವೇಷದಿಂದ ಕಾರ್ಖಾನೆಗೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ನಂಜನಗೂಡು ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.