ಮೈಸೂರು:ರೈತರ ಸಾಲ ಮನ್ನಾ ಮಾಡುವುದಕ್ಕಿಂತ ಅವರ ಕೃಷಿಗೆ ಲಾಭದಾಯಕ ವೇದಿಕೆ ಒದಗಿಸಿಕೊಡಬೇಕಿದೆ ಎಂದು ಅಮೆರಿಕದ ವಾಷಿಂಗ್ಟನ್ ಡಿಸಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಸಂಶೋಧನಾ ವಿಭಾಗದ ಆರ್ಥಿಕ ಸಲಹೆಗಾರರು ಮತ್ತು ನಿರ್ದೇಶಕಿಯಾಗಿರುವ ಡಾ. ಗೀತಾ ಗೋಪಿನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿರುವ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಸುವರ್ಣ ಮಹೋತ್ಸವದ ದತ್ತಿ ಉಪನ್ಯಾಸದಲ್ಲಿ' ಜಾಗತೀಕರಣ - ಸವಾಲುಗಳು ಮತ್ತು ಸಹಕಾರದ ಅಗತ್ಯ' ವಿಷಯ ಕುರಿತು ಅವರು ಮಾತನಾಡಿದರು.
ಕೃಷಿ ಸಾಲ ನೀಡುವುದರಿಂದ ಪ್ರಗತಿಗೆ ಅನುಕೂಲವಾಗಲಿದೆ. ಆದ್ರೆ, ಇದರಿಂದ ದೇಶದ ಆರ್ಥಿಕತೆ ಮೇಲೆ ಹೊಡೆತ ಬೀಳಲಿದೆ. ಹಾಗಾಗಿ ಕೃಷಿಗೆ ದೇಶದಲ್ಲಿ ಉತ್ತಮ ವೇದಿಕೆ ಒದಗಿಸಿಕೊಟ್ಟರೆ, ಎಲ್ಲ ರೈತರಿಗೆ ಅನುಕೂಲವಾಗಲಿದೆ. ಭಾರತಕ್ಕೆ ಜಿಡಿಪಿಯಲ್ಲಿ ಹಿನ್ನಡೆಯಾಗುತ್ತಿದೆ. ಈ ಸಂಬಂಧ ಭಾರತ ಸರ್ಕಾರ ಆರ್ಥಿಕ ತಜ್ಞರ ಸಲಹೆ ಪಡೆದು ಆರ್ಥಿಕತೆಯನ್ನು ಮೇಲೆತ್ತುವ ಕೆಲಸ ಮಾಡಬೇಕಿದೆ. ಆರ್ಥಿಕತೆ ಸ್ಥಿರವಾಗಿದ್ದರೆ ದೇಶದ ಅಭಿವೃದ್ಧಿ ಸಾಧ್ಯವೆಂದು ಗೀತಾ ಗೋಪಿನಾಥ್ ಪ್ರತಿಪಾದಿಸಿದರು.
ಸಾಲಮನ್ನಾ ಬದಲು ಕೃಷಿಗೆ ಉತ್ತಮ ವೇದಿಕೆ ಕಲ್ಪಿಸುವಂತೆ ವಾಷಿಂಗ್ಟನ್ ಡಿಸಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಸಂಶೋಧನಾ ವಿಭಾಗದ ಆರ್ಥಿಕ ಸಲಹೆಗಾರ್ತಿ ಮತ್ತು ನಿರ್ದೇಶಕಿಡಾ. ಗೀತಾ ಗೋಪಿನಾಥ್ ಸಲಹೆ ಲೇಖಕ ಎಸ್. ಗುರುಮೂರ್ತಿ ಅವರು ಬರೆದಿರುವ 'ಭಾರತ್-ಗ್ಲೋಬಲ್ ಆ್ಯಂಬಿಷನ್ಸ್ ಆ್ಯಂಡ್ ಲೋಕಲ್ ಚಾಲೆಂಜಸ್' ಕೃತಿಯನ್ನು ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ್ ಬಿಡುಗಡೆಗೊಳಿಸಿದರು. ಈ ವೇಳೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈವಿವಿ ಕುಲಪತಿ ಡಾ. ಜಿ.ಹೇಮಂತ್ ಕುಮಾರ್, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜೆ. ಬೆಟಸೂರಮಠ, ಜೆಎಸ್ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್. ಸುರೇಶ್ ಸೇರಿದಂತೆ ರೈತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.