ಮೈಸೂರು: ಇಲ್ಲಿನ ವಿಜಯನಗರದ ನಾಲ್ಕನೇ ಹಂತದಲ್ಲಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ನಿವಾಸದ ಮುಂಭಾಗ ಖಾಲಿ ಬಾಟಲಿ ಹಾಗೂ ಗುಜರಿ ಸಾಮಗ್ರಿಗಳನ್ನು ಸುರಿಯಲು ಹೋಗುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋದರು.
ಸಂಸದ ಪ್ರತಾಪ್ ಸಿಂಹ ಮನೆ ಮುಂದೆ ಕಸ ಸುರಿಯಲು ಯತ್ನ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ - protesters trying to pour trash in front of pratap simha house
ಸಂಸದ ಪ್ರತಾಪ್ ಸಿಂಹ ಮನೆ ಮುಂದೆ ಖಾಲಿ ಬಾಟಲಿ, ಗುಜರಿ ವಸ್ತುಗಳನ್ನು ಸುರಿಯಲು ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
![ಸಂಸದ ಪ್ರತಾಪ್ ಸಿಂಹ ಮನೆ ಮುಂದೆ ಕಸ ಸುರಿಯಲು ಯತ್ನ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ Protest](https://etvbharatimages.akamaized.net/etvbharat/prod-images/768-512-14952825-thumbnail-3x2-lek.jpg)
Protest
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮುಖಂಡ ಚೋರನಹಳ್ಳಿ ಶಿವಣ್ಣ ಅವರು ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯಿಂದ ಮುಸ್ಲಿಮರು ಹಳ್ಳಿಗಳಲ್ಲಿ ಸ್ಕ್ರ್ಯಾಪ್ ವಸ್ತುಗಳು, ಹಳೆ ಪೇಪರ್, ಗುಜರಿ ವಸ್ತುಗಳನ್ನು ಖರೀದಿ ಮಾಡಲು ಬರುತ್ತಿಲ್ಲ. ಅದ್ದರಿಂದ ನಮಗೆ ನಷ್ಟವಾಗುತ್ತದೆ. ಈ ನಷ್ಟವನ್ನು ಪ್ರತಾಪ್ ಸಿಂಹ ಅವರು ಸರಿದೂಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಾಪ್ ಸಿಂಹ ಮನೆ ಮುಂದೆ ಕಸ ಸುರಿಯಲು ಯತ್ನ
ಇದನ್ನೂ ಓದಿ:ಹಿರಿಯರಿಗೆ ಕೊಕ್ ಕೊಟ್ಟರೂ ಓಕೆ, ವಿಜಯೇಂದ್ರಗೆ ಸಚಿವ ಸ್ಥಾನ ನೀಡಿದ್ರು ಸಂತೋಷ: ಉಮೇಶ್ ಕತ್ತಿ