ಕರ್ನಾಟಕ

karnataka

ETV Bharat / state

ಬಿಎಸ್​ವೈ ಪರ ಮಠಾಧೀಶರ ವಕಾಲತ್ತು.. ಮೈಸೂರಿನಲ್ಲಿ ಕಾವಿಧಾರಿಗಳಿಂದ ವಿರೋಧ!

ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿಯಬೇಕೆಂದು ಬೆಂಗಳೂರಿನಲ್ಲಿ ಮಠಾಧೀಶರು ಸಮಾವೇಶ ಕೈಗೊಂಡಿದ್ದರೆ, ಮೈಸೂರಿನಲ್ಲಿ ಕಾವಿಧಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಎಸ್​ವೈ ಪರ ಮಠಾಧೀಶರ ವಕಾಲತ್ತು.. ಮೈಸೂರಿನಲ್ಲಿ ಕಾವಿಧಾರಿಗಳಿಂದ ವಿರೋಧ!
ಬಿಎಸ್​ವೈ ಪರ ಮಠಾಧೀಶರ ವಕಾಲತ್ತು.. ಮೈಸೂರಿನಲ್ಲಿ ಕಾವಿಧಾರಿಗಳಿಂದ ವಿರೋಧ!

By

Published : Jul 25, 2021, 1:46 PM IST

ಮೈಸೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕೆಂದು ಬೆಂಗಳೂರಿನಲ್ಲಿ ವಿವಿಧ ಮಠಾಧೀಶರು ಸಮಾವೇಶ ಕೈಗೊಂಡಿದ್ದರೆ, ಇತ್ತ ಮೈಸೂರಿನ ಕಾವಿಧಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಎಸ್​ವೈ ಪರ ಮಠಾಧೀಶರ ವಕಾಲತ್ತು.. ಮೈಸೂರಿನಲ್ಲಿ ಕಾವಿಧಾರಿಗಳಿಂದ ವಿರೋಧ!

ಮೈಸೂರು ನ್ಯಾಯಾಲಯದ ಮುಂಭಾಗವಿರುವ ಗಾಂಧೀಜಿ ಪುತ್ಥಳಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಕಾವಿ ಬಟ್ಟೆ ಧರಿಸಿ, ಸಿಎಂ ಪರ ಸಮಾವೇಶ ಮಾಡುತ್ತಿರುವ ಮಠಾಧೀಶರ ವಿರುದ್ಧ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಕಾವಿ ಕಳಚಿ, ಖಾದಿ ಧರಿಸಿ ಸಮಾವೇಶ ಮಾಡಿ. ಮಠಾಧೀಶರ ಘನತೆಯನ್ನು ಹಾಳು ಮಾಡಬೇಡಿ. ಮಠಕ್ಕೆ ತನ್ನದೇ ಆದ ಗೌರವವಿದೆ ಎಂದು ಅಣಕು ಪ್ರದರ್ಶನ ತೋರಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಮಾತನಾಡಿ, ರಾಜಕ್ಕೆ ಬರಬೇಕಾದ ಜಿಎಸ್​​ಟಿ, ಪರಿಹಾರಗಳ ಬಗ್ಗೆ ಮಠಾಧೀಶರು ಮಾತನಾಡಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗ ದನಿಯೆತ್ತಲಿಲ್ಲ. ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ಆದರೆ, ಸಿಎಂ ಬದಲಾವಣೆ ವಿಚಾರವಾಗಿ ಮಠಾಧೀಶರು ಬೀದಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಜನಪರ ಕೆಲಸ ಮಾಡುವ ಗುಣ ಬಿಎಸ್​ವೈ ರಕ್ತದಲ್ಲೇ ಇದೆ: ಆರ್​. ಅಶೋಕ್

ABOUT THE AUTHOR

...view details