ಕರ್ನಾಟಕ

karnataka

ETV Bharat / state

ನಂಜನಗೂಡು ನಗರಸಭಾಧ್ಯಕ್ಷ ನಿಂದನೆ, ಬೆದರಿಕೆ ಆರೋಪ: ವಿಕಲಚೇತನನಿಂದ ಏಕಾಂಗಿ ಪ್ರತಿಭಟನೆ - protest by the disabled

ನಂಜನಗೂಡು ನಗರಸಭಾಧ್ಯಕ್ಷ ಮಹದೇವಸ್ವಾಮಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಕಲಚೇತನನೋರ್ವ ನಗರಸಭೆ ಎದುರು ಪ್ರತಿಭಟನೆ ನಡೆಸಿದ್ದಾನೆ. ಪೊಲೀಸರು ದೂರು ನೀಡಿದರು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

protest by the disabled  in nanjagudu
ವಿಕಲಚೇತನನಿಂದ ಏಕಾಂಗಿ ಪ್ರತಿಭಟನೆ

By

Published : Apr 5, 2021, 10:56 PM IST

ನಂಜನಗೂಡು: ನಗರಸಭೆ ಅಧ್ಯಕ್ಷ ನಿಂದಿಸಿ, ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ವಿಕಲಚೇತನನೋರ್ವ ಏಕಾಂಗಿಯಾಗಿ ನಗರಸಭೆ ಕಚೇರಿ ಮುಂಭಾಗ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ವಿಕಲಚೇತನನಿಂದ ಏಕಾಂಗಿ ಪ್ರತಿಭಟನೆ

ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ ಅವರು ತಿಂಗಳ ಹಿಂದೆ ನಗರಸಭೆ ಕಚೇರಿಯ ಒಳಗೆ ನಿಂದಿಸಿದ್ದಾರೆ. ಈ ವಿಚಾರವಾಗಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ನಗರಸಭೆ ಅಧ್ಯಕ್ಷ ಹಾಗೂ ಪ್ರಭಾವಿ ರಾಜಕಾರಣಿಯಾಗಿರುವ ಕಾರಣ ಪೊಲೀಸರು ಕ್ರಮ ಕೈಗೊಂಡಿಲ್ಲ. ವಿಕಲಚೇತನನಾದ ನನಗೆ ಅನ್ಯಾಯವಾಗಿದೆ ಎಂದು ರವಿ ಆರೋಪಿಸಿದ್ದಾನೆ.

ನಗರಸಭಾಧ್ಯಕ್ಷನ ವಿರುದ್ಧ ಕ್ರಮ ಕೈಗೊಳ್ಳುವ ತನಕ ಈ ಕಚೇರಿಯ ಮುಂಭಾಗದಲ್ಲೇ ಉಪವಾಸ ಮಾಡಿ ಪ್ರತಿಭಟನೆ ನಡೆಸುತ್ತೇನೆ ಎಂದು ಪಟ್ಟುಹಿಡಿದು ಕುಳಿತಿದ್ದಾನೆ.

ABOUT THE AUTHOR

...view details