ಮೈಸೂರು: ಪ್ರಗತಿಪರ ಚಿಂತಕ ಪ.ಮಲ್ಲೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಮೈಸೂರು ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘ ಮತ್ತು ಬ್ರಾಹ್ಮಣರ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಗನ್ ಹೌಸ್ ಬಳಿ ಇರುವ ಶಂಕರಮಠದ ಆವರಣದಿಂದ ಮೆರವಣಿಗೆ ಹೊರಟು, ಚಾಮರಾಜ ಜೋಡಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಡಿ.ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಪ.ಮಲ್ಲೇಶ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬ್ರಾಹ್ಮಣರಿಂದ ಬೃಹತ್ ಪ್ರತಿಭಟನೆ ಪ.ಮಲ್ಲೇಶ್ ಅವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬ್ರಾಹ್ಮಣರ ಆಚರಣೆಯನ್ನು ನಂಬಬೇಡಿ. ವೇದಗಳು,ಉಪನಿಷತ್ತುಗಳು ಈ ದೇಶವನ್ನು ಹಾಳುಮಾಡುತ್ತಿವೆ ಎಂದು ಅವಹೇಳನ ಮಾಡಿದ್ದರು. ಈ ಬಗ್ಗೆ ಮಲ್ಲೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬ್ರಾಹ್ಮಣರ ಸಮುದಾಯವನ್ನು ಅಪಮಾನ ಮಾಡಿದ ಪ.ಮಲ್ಲೇಶ್ ಅವರು, ಇಂತಹ ಹೇಳಿಕೆಗಳನ್ನು ಮುಂದಿನ ದಿನಗಳಲ್ಲಿ ನೀಡಬಾರದು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಬ್ರಾಹ್ಮಣರನ್ನು ನಂಬಬೇಡಿ ಎಂಬ ಪದ ಬಳಕೆ ಬಗ್ಗೆ ನನಗೆ ವಿಷಾದವಿದೆ: ಪ ಮಲ್ಲೇಶ್