ಮೈಸೂರು: ಜಿಲ್ಲೆಗೆ ತಿಂಗಳ ಹಿಂದಷ್ಟೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಬಿ. ಶರತ್ ಅವರ ವರ್ಗಾವಣೆ ಖಂಡಿಸಿ, ಮೈಸೂರು ಕನ್ನಡ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಬಿ.ಶರತ್ ವರ್ಗಾವಣೆ ಖಂಡಿಸಿ ಪ್ರತಿಭಟನೆ - Mysore Latest News
ಉತ್ತಮವಾಗಿ ಕಾರ್ಯನಿರ್ವಹಿಸಿ ಮೈಸೂರಿಗೆ ಕೆಲಸ ಮಾಡಲು ಬಂದಿದ್ದ, ಇಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಸೂಕ್ತ ಕ್ರಮವಲ್ಲವೆಂದು ಕಿಡಿಕಾರಿದರು.
ದಕ್ಷ ಅಧಿಕಾರಿಯಾಗಿರುವ ಬಿ.ಶರತ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಮೈಸೂರಿನ ಜನತೆಗೆ ಆಘಾತವನ್ನುಂಟು ಮಾಡಿದೆ. ಈ ಹಿಂದೆ ಕಲಬುರಗಿಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿ ಕೋವಿಡ್ ನಿಯಂತ್ರಿಸಲು ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸಿ ಮೈಸೂರಿಗೆ ಕೆಲಸ ಮಾಡಲು ಬಂದಿದ್ದ, ಇಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಸೂಕ್ತ ಕ್ರಮವಲ್ಲವೆಂದು ಕಿಡಿಕಾರಿದರು.
ಬಿ.ಶರತ್ ಅವರು ಹಿಂದುಳಿದ ವರ್ಗದಿಂದ ಬಂದು, ಜನರ ಕಷ್ಟಗಳನ್ನು ಬಲ್ಲವರಾಗಿದ್ದಾರೆ. ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ. ಆದರೆ, ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿರುವುದು ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಿದರು.