ಕರ್ನಾಟಕ

karnataka

ETV Bharat / state

ಟೋಲ್ ಫೀ ಸಂಗ್ರಹದ ವಿರುದ್ಧ ಮೈಸೂರು-ನಂಜನಗೂಡು ರಸ್ತೆಯಲ್ಲಿ ಪ್ರತಿಭಟನೆ - ಮೈಸೂರು-ನಂಜನಗೂಡು ರಸ್ತೆಯಲ್ಲಿ ಪ್ರತಿಭಟನೆ

ಮೈಸೂರು-ನಂಜನಗೂಡು ರಸ್ತೆ ಕೆ.ಎನ್‌‌.ಹುಂಡಿ ಹತ್ತಿರವಿರುವ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಸಂಗ್ರಹ ಮಾಡದಂತೆ ವಿವಿಧ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿವೆ.

Protest in Mysore Nanjanagudu road,ಮೈಸೂರು-ನಂಜನಗೂಡು ರಸ್ತೆಯಲ್ಲಿ ಪ್ರತಿಭಟನೆ
ಮೈಸೂರು-ನಂಜನಗೂಡು ರಸ್ತೆಯಲ್ಲಿ ಪ್ರತಿಭಟನೆ

By

Published : Dec 14, 2019, 5:32 PM IST

ಮೈಸೂರು: ಮೈಸೂರು-ನಂಜನಗೂಡು ರಸ್ತೆ ಕೆ.ಎನ್‌‌.ಹುಂಡಿ ಹತ್ತಿರವಿರುವ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಸಂಗ್ರಹ ಮಾಡದಂತೆ ವಿವಿಧ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿವೆ.

ದಲಿತ ಸಂಘರ್ಷ ಸಮಿತಿ, ಕನ್ನಡ ಗೆಳೆಯರ ಬಳಗ, ಜನ ಸಂಗ್ರಾಮ ಪರಿಷತ್, ಕಬ್ಬು ಬೆಳೆಗಾರರ ಸಂಘ, ಕಬ್ಬು ಸರಬರಾಜು ಮಾಡುವ ಲಾರಿ ಮಾಲೀಕರು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಜೊತೆಗೂಡಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಮೈಸೂರು-ನಂಜನಗೂಡು ರಸ್ತೆಯಲ್ಲಿ ಪ್ರತಿಭಟನೆ

ಸೇವಾ ರಸ್ತೆ (ಸರ್ವಿಸ್ ರೋಡ್) ಸ್ಥಳೀಯರಿಗೆ ನಿರ್ಮಿಸಿ ನಂತರ ಟೋಲ್ ಶುಲ್ಕ ವಿಧಿಸಬೇಕಾಗಿತ್ತು. ಆದರೆ ಯಾವುದೇ ಸಿದ್ಧತೆಯಿಲ್ಲದೇ ಶುಲ್ಕ ವಿಧಿಸುತ್ತಿದ್ದಾರೆ. ಅಲ್ಲದೇ ಸ್ಥಳೀಯರಿಗೆ ಉಚಿತವಾಗಿ ನೀಡಬೇಕು. ಇದನ್ನು ಗಮನದಲ್ಲಿಟ್ಟುಕೊಳ್ಳದೇ ಟೋಲ್ ಶುಲ್ಕದ ಮೂಲಕ ಜನರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಈ ರಸ್ತೆ ಮೂಲಕ ಕೈಗಾರಿಕಾ ವಸಾಹತುಗಳಿಗೆ ಸಂಪರ್ಕವಿರುವುದರಿಂದ ಮೈಸೂರಿನಿಂದ ಬರುವ ವಾಹನ ಸವಾರರಿಗೆ ತೊಂದರೆಯಾಗಲಿದೆ. ಟೋಲ್ ವ್ಯವಸ್ಥೆ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.

For All Latest Updates

ABOUT THE AUTHOR

...view details