ಮೈಸೂರು: ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ತರಕಾರಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು: ತರಕಾರಿ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ವ್ಯಾಪಾರಿಗಳ ಪ್ರತಿಭಟನೆ - shifting of vegetable market
ಎಂ.ಜಿ. ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಇಂದಿನಿಂದ ದಸರಾ ವಸ್ತು ಪ್ರದರ್ಶನದ ಆವರಣಕ್ಕೆ ಸ್ಥಳಾಂತರ ಮಾಡಲಾಗಿದೆ. ಹೀಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ತರಕಾರಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
![ಮೈಸೂರು: ತರಕಾರಿ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ವ್ಯಾಪಾರಿಗಳ ಪ್ರತಿಭಟನೆ protest against shifting of vegetable market](https://etvbharatimages.akamaized.net/etvbharat/prod-images/768-512-6570813-thumbnail-3x2-mysore.jpg)
ಎಂ.ಜಿ. ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆ ಇಂದಿನಿಂದ ದಸರಾ ವಸ್ತು ಪ್ರದರ್ಶನದ ಆವರಣಕ್ಕೆ ಸ್ಥಳಾಂತರ ಮಾಡಲಾಗಿದೆ. ಗ್ರಾಹಕರು ಅಲ್ಲಿಗೆ ಬರುವುದಿಲ್ಲ, ನಮಗೂ ಕೂಡಾ ಅಲ್ಲಿಗೆ ಬಂದು ವ್ಯಾಪಾರ ಮಾಡಲು ಆಗುವುದಿಲ್ಲವೆಂದರು. ಎಂ.ಜಿ. ರಸ್ತೆಯಲ್ಲಿರುವ ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಹಾಗೂ ಆರೋಗ್ಯ ವ್ಯವಸ್ಥೆ ಮಾಡಿ, ಸ್ಥಳಾಂತರ ಮಾಡಿದರೆ ಕೊರೊನಾ ವೈರಸ್ ಬರೋದಿಲ್ಲವೇ ಎಂದು ಈ ವೇಳೆ ಪೊಲೀಸರನ್ನ ಪ್ರತಿಭಟನಾಕಾರರು ಪ್ರಶ್ನಿಸಿದರು.
ಹಲವು ವರ್ಷಗಳಿಂದ ಎಂ.ಜಿ. ರಸ್ತೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ, ಕೊರೊನಾ ವೈರಸ್ ಹೆಸರು ಹೇಳಿ ಸ್ಥಳಾಂತರ ಮಾಡಿದರೆ ಹೇಗೆ? ನಾವು ವ್ಯಾಪಾರ ಮಾಡುವ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ಸಂಬಂಧ ನೆರವು ಒದಗಿಸಿ ಎಂದು ಪಟ್ಟು ಹಿಡಿದರು.