ಮೈಸೂರು: ಕಾರ್ಮಿಕರನ್ನು ಬಿಳಗೆರೆ ಪಿಎಸ್ಐ ಯಶವಂತ್ ಕುಮಾರ್ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎಂದು ಕೆಲಸ ಸ್ಥಗಿತಗೊಳಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಪಿಎಸ್ಐ ವಿರುದ್ಧ ಕಾರ್ಮಿಕರಿಂದ ಪ್ರತಿಭಟನೆ
ಮೈಸೂರು: ಕಾರ್ಮಿಕರನ್ನು ಬಿಳಗೆರೆ ಪಿಎಸ್ಐ ಯಶವಂತ್ ಕುಮಾರ್ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎಂದು ಕೆಲಸ ಸ್ಥಗಿತಗೊಳಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಇಲ್ಲಿನ ನಂಜನಗೂಡು ಹೊರವಲಯದ ಬನ್ನಾರಿಯಮ್ಮನ್ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ಕೈಗೊಂಡ ಕಾರ್ಮಿಕರು, ಯಶವಂತ್ ಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಬೇಕು. ಇಲ್ಲವೇ ಕಾರ್ಮಿಕರ ಎದುರು ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದರು.