ಮೈಸೂರು:ಹುಣಸೂರಿನ ಜೆಡಿಎಸ್ ಕಚೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ವಿಶ್ವನಾಥ್ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಹುಣಸೂರಿನಲ್ಲಿ ಭುಗಿಲೆದ್ದ ಅಸಮಾಧಾನ : ಹೆಚ್ .ವಿಶ್ವನಾಥ್ ವಿರುದ್ಧ ಪ್ರತಿಭಟನೆ - kannada news
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ವಿರೋಧಿಸಿ ಹುಣಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಹೆಚ್.ವಿಶ್ವನಾಥ್ ವಿರುದ್ದ ಪ್ರತಿಭಟನೆ ನಡೆಸಿದರು.
ಹೆಚ್. ವಿಶ್ವನಾಥ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ
ಯಾರನ್ನು ಕೇಳಿ ರಾಜೀನಾಮೆ ಕೊಟ್ಟಿದ್ದೀರಾ?. ಗೆಲ್ಲಿಸೋಕೆ ನಾವು ಬೇಕು, ರಾಜೀನಾಮೆ ಕೊಡುವಾಗ ನಾವು ಬೇಡ. ಕನಿಷ್ಠ ಕಾರ್ಯಕರ್ತರ ಅಭಿಪ್ರಾಯ ಕೇಳದೆ ರಾಜೀನಾಮೆ ನೀಡಿದ್ದು ತಪ್ಪು ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.