ಕರ್ನಾಟಕ

karnataka

ETV Bharat / state

ಕಾಡಾನೆ ಹಿಂಡಿನಿಂದ ತಪ್ಪಿಸಿಕೊಂಡು ಕಂದಕಕ್ಕೆ ಬಿದ್ದಿದ್ದ ಆನೆ ಮರಿಯ ರಕ್ಷಣೆ - Forest office

ಎರಡು ವರ್ಷದ ಗಂಡಾನೆ ಮರಿಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದು, ಕಾಡಾನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಂದು ಕಂದಕದಲ್ಲಿ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

protection-of-an-elephant-cub-who-escaped-from-a-herd-and-fell-into-a-ditch
ಕಾಡಾನೆ ಹಿಂಡಿನಿಂದ ತಪ್ಪಿಸಿಕೊಂಡು ಕಂದಕಕ್ಕೆ ಬಿದ್ದಿದ್ದ ಆನೆ ಮರಿ ರಕ್ಷಣೆ

By

Published : Mar 23, 2021, 10:33 PM IST

ಮೈಸೂರು:ತಾಯಿಯಿಂದ ಬೇರ್ಪಟ್ಟು ಕಂದಕಕ್ಕೆ ಬಿದ್ದು, ಘೀಳಿಡುತ್ತಿದ್ದ ಆನೆ ಮರಿಯನ್ನು ರಕ್ಷಣೆ ಮಾಡಿ ಮರಳಿ ಕಾಡಿಗೆ ಬಿಡಲಾಗಿದೆ. ಹೆಚ್.ಡಿ.ಕೋಟೆ ತಾಲೂಕಿನ ಕೂರ್ಣೆಗಾಲ ಗ್ರಾಮದ ಬಳಿ ಕಂದಕಕ್ಕೆ ಬಿದ್ದು ಆನೆ ಮರಿ ಸಂಕಷ್ಟಕ್ಕೆ ಸಿಲುಕಿತ್ತು.

ಎರಡು ವರ್ಷದ ಗಂಡಾನೆ ಮರಿಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದು, ಕಾಡಾನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಂದು ಕಂದಕದಲ್ಲಿ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಸಹಾಯದಿಂದ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗಂಡಾನೆ ಮರಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ:ಕೈ ಬೀಸಿ ಕರೆಯುತ್ತಿದೆ ಕಾಳಿಮಾತಾ ದ್ವೀಪದಲ್ಲಿನ ಮ್ಯಾಂಗ್ರೋವ್ ಬೋರ್ಡ್ವಾಕ್!

ABOUT THE AUTHOR

...view details